ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಅಂಚೆ ಮೂಲಕ ಡ್ರಗ್ಸ್ ಸಾಗಣೆ: ಆರೋಪಿ ಬಂಧನ

Published 3 ಫೆಬ್ರುವರಿ 2024, 15:56 IST
Last Updated 3 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ಅಂಚೆ ಮೂಲಕ ಡ್ರಗ್ಸ್ ಪಾರ್ಸೆಲ್ ತರಿಸಿಕೊಂಡು ನಗರದಲ್ಲಿ ಮಾರುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ಆರೋಪಿ ರಿತಿಕ್‌ರಾಜ್‌ ಎಂಬಾತನನ್ನು ಬಂಧಿಸಿದ್ದಾರೆ.

‘ಜಾರ್ಖಂಡ್‌ನ ರಿತಿಕ್ ರಾಜ್ ಹಲವು ತಿಂಗಳಿನಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಮಾಹಿತಿ ಇದೆ. ಜಾಲದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಹೊರ ರಾಜ್ಯಗಳಿಂದ ಅಂಚೆ ಮೂಲಕ ಡ್ರಗ್ಸ್ ಪಾರ್ಸೆಲ್ ತರಿಸುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಉಡುಗೊರೆ ನೆಪದಲ್ಲಿ ಅಂಚೆ ಮೂಲಕ ಡ್ರಗ್ಸ್ ಪಾರ್ಸೆಲ್ ಬಂದಿತ್ತು. ಅದನ್ನು ಪಡೆಯಲು ಬಂದಿದ್ದ ಸಂದರ್ಭದಲ್ಲಿಯೇ ರಿತಿಕ್‌ ರಾಜ್‌ನನ್ನು ಸೆರೆ ಹಿಡಿಯಲಾಯಿತು’ ಎಂದು ತಿಳಿಸಿದರು.

‘₹ 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪಾರ್ಸೆಲ್‌ನಲ್ಲಿತ್ತು. ‘ಕೇರಳದ ವ್ಯಕ್ತಿಯೊಬ್ಬ ಪಾರ್ಸೆಲ್ ಕಳುಹಿಸುತ್ತಿದ್ದ. ಅದನ್ನು ಪಡೆದು ಮಧ್ಯವರ್ತಿಗಳ ಮೂಲಕ ಗ್ರಾಹಕರಿಗೆ ಡ್ರಗ್ಸ್ ಮಾರುತ್ತಿದ್ದೆ’ ಎಂಬುದಾಗಿ ಆರೋಪಿ ರಿತಿಕ್‌ರಾಜ್ ಹೇಳಿಕೆ ನೀಡಿದ್ದಾನೆ. ಕೇರಳದ ವ್ಯಕ್ತಿಯನ್ನು ಪತ್ತೆ ಮಾಡಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT