ಬುಧವಾರ, ಜನವರಿ 29, 2020
25 °C

ಬಸ್‌ ಚಾಲನೆ: ಈಗ ಕಳಸದ ಸರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ವೋಲ್ವೊ ಬಸ್‌ ಚಾಲನೆ ಮಾಡಿರುವ ಬೆನ್ನಲ್ಲೇ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಬಸ್ ಚಾಲನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಳಸದ ಅವರು ಬಸ್ ಚಾಲನೆ ಮಾಡುತ್ತಿದ್ದರೆ, ಬಸ್‌ ಮತ್ತು ತರಬೇತಿ ಕೇಂದ್ರದ ಬಗ್ಗೆ ವೋಲ್ವೊ ಕಂಪನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಿದ್ದಾರೆ. 35 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಬಿಎಂಟಿಸಿ ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕ ಅನುಪಮ್ ಅಗ್ರವಾಲ್ ಕೂಡ ಇದ್ದಾರೆ.

ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಶಿಖಾ ಅವರು ಬಸ್‌ ಚಾಲನೆ ಮಾಡಿದ ವಿಡಿಯೊ ಕೂಡ ಇದೇ ಸಂದರ್ಭದ್ದು ಎಂದು ಹೇಳಲಾಗಿದೆ.

‘ಹೊಸಕೋಟೆ ಬಳಿಯ ವೋಲ್ವೊ ಕಂಪನಿಯ ತರಬೇತಿ ಕೇಂದ್ರದ ಆವರಣದಲ್ಲಿ ಶಿಖಾ ಬಸ್ ಚಾಲನೆ ಮಾಡಿದ್ದಾರೆ’ ಎಂದು ಬಿಎಂಟಿಸಿ ಸ್ಪಷ್ಟಪಡಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು