ಶನಿವಾರ, ಆಗಸ್ಟ್ 24, 2019
28 °C

ಆರೋಪಿಗಳ ಕಾಲಿಗೆ ಗುಂಡೇಟು

Published:
Updated:

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಮಾದನಾಯಕನಹಳ್ಳಿ ನಿವಾಸಿಗಳಾದ ಶಂಕರ್ (24) ಮತ್ತು ಶರಣ್ (27) ಬಂಧಿತರು. ತಮ್ಮ ನಾಲ್ವರು ಸಹಚರರ ಜತೆ ಸೇರಿ ಜುಲೈ 23ರಂದು ಮಂಜುನಾಥ್ ಎಂಬುವವರನ್ನು ಅಪಹರಿಸಿದ್ದ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ನಿರಾಕರಿಸಿದಾಗ ಕೊಲೆ ಮಾಡಿ ಪರಾರಿಯಾಗಿದ್ದರು.

ಆರೋಪಿಗಳು ಮಾಗಡಿ ರಸ್ತೆಯ ಬಳಿ ಓಡಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಬುಧವಾರ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮಾಚೋಹಳ್ಳಿ ಫಾರೆಸ್ಟ್ ಗೇಟ್ ಬಳಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಬಂಧಿಸಲು ಮುಂದಾದಾಗ ಕಾನ್‌ಸ್ಟೆಬಲ್‌ ಮನಗುಂಡಿ ಹಾಗೂ ಪಿಎಸ್‍ಐ ಮುರಳಿ ಎಂಬುವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಈ ವೇಳೆ ಆರೋಪಿಗಳ ಕಾಲಿಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸತ್ಯನಾರಾಯಣ್ ಗುಂಡು ಹಾರಿಸಿದ್ದಾರೆ.

ಗಾಯಗೊಂಡಿರುವ ಆರೋಪಿಗಳು ಮತ್ತು ಪೊಲೀಸರು ಮಾಗಡಿ ರಸ್ತೆಯ ಅನುಪಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Post Comments (+)