ಸಿಲ್ಕ್ ಬೋರ್ಡ್‌ ಮೆಟ್ರೊ ಕಾಮಗಾರಿ ಬಿಎಸ್ಎನ್ಎಲ್ ಸಂಪರ್ಕ ಕಡಿತ

7

ಸಿಲ್ಕ್ ಬೋರ್ಡ್‌ ಮೆಟ್ರೊ ಕಾಮಗಾರಿ ಬಿಎಸ್ಎನ್ಎಲ್ ಸಂಪರ್ಕ ಕಡಿತ

Published:
Updated:
Deccan Herald

ಬೆಂಗಳೂರು: ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ನಿಂದ ಆರಂಭವಾಗಿರುವ ಮೆಟ್ರೊ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ಬಿಎಸ್ಎನ್ಎಲ್ ದೂರವಾಣಿ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಸಿಲ್ಕ್ ಬೋರ್ಡ್‌ನಿಂದ ಕೂಡ್ಲುಗೇಟ್‌ವರೆಗಿನ ಸುಮಾರು 800 ಸಂಪರ್ಕಗಳು ಒಂದು ವಾರದಿಂದ ಬಂದ್ ಆಗಿವೆ. ಇಂಟರ್‌ನೆಟ್‌ ಕೂಡಾ ಲಭ್ಯವಿಲ್ಲ. ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆ, ಆಸ್ಪತ್ರೆ, ಕೆಲವು ಐಟಿ ಕಂಪನಿಗಳು ಇದರಿಂದ ತೊಂದರೆ ಅನುಭವಿಸುತ್ತಿವೆ.

‘ಮೆಟ್ರೊ ನಿಗಮ ಮತ್ತು ಬಿಎಸ್ಎನ್ಎಲ್ ನಡುವಿನ ಕಾಮಗಾರಿ ಪೂರ್ವ ಕರಾರಿನಂತೆ ನಿಗಮವು ಪರ್ಯಾಯ ಕೇಬಲ್‌ ಮಾರ್ಗ ನೀಡಬೇಕಿತ್ತು. ಆದರೆ ಮಾರ್ಗ ಒದಗಿಸಿಲ್ಲದ ಕಾರಣ ಕಡಿತಗೊಂಡ ಸಂಪರ್ಕಗಳನ್ನು ಜೋಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬಿಎಸ್‌ಎನ್‌ಎಲ್‌ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.  

‘ಹತ್ತು ದಿನಗಳಿಂದ ಕಚೇರಿಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ, ಸಾರ್ವಜನಿಕರು ಬಂದು ಹೋಗುತ್ತಿದ್ದಾರೆ, ಈ ಬಗ್ಗೆ ಬಿಎಸ್ಎನ್ಎಲ್ ಎಂಜಿನಿಯರ್‌ಗಳು ಮೂರು ದಿನದಲ್ಲಿ ಸರಿಹೋಗುತ್ತದೆ ಎನ್ನುತ್ತಾರೆ. ಆದರೆ ಈವರೆಗೂ ಸಂಪರ್ಕ ನೀಡಿಲ್ಲ’ ಎನ್ನುತ್ತಾರೆ ಬಿಬಿಎಂಪಿ ಸಿಬ್ಬಂದಿ ಪ್ರದೀಪ್.

‘ಕರಾರಿನಂತೆ ನಮಗೆ ಪರ್ಯಾಯ ಮಾರ್ಗ ನೀಡಿಲ್ಲ. ಈ ಸಂಬಂಧ ಬಿಎಂಆರ್‌ಸಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆದರೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮರು ಸಂಪರ್ಕ ಕಲ್ಪಿಸುವ ಕೆಲಸವನ್ನು ಗುತ್ತಿಗೆ ನೀಡಲಾಗಿದ್ದು, ಹಗಲು ರಾತ್ರಿ ಕೆಲಸ ನಡೆಯುತ್ತಿದೆ ನಾಲ್ಕು ದಿನದಲ್ಲಿ ಸಂಪರ್ಕ ನೀಡುತ್ತೇವೆ’ ಎಂದು ಬಿಎಸ್‌ಎನ್‌ಎಲ್‌ ಎಂಜಿನಿಯರ್‌ ಪ್ರಕಾಶ್ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !