ಮೊಬೈಲ್ ವ್ಯಾನ್ ಬಳಕೆ
ಕೊಳೆಗೇರಿ ನಿವಾಸಿಗಳಿಗೆ ಉಪಶಾಮಕ ಚಿಕಿತ್ಸೆ ಒದಗಿಸುವ ಸಂಬಂಧ ಮೊಬೈಲ್ ವ್ಯಾನ್ ಬಳಕೆ ಮಾಡಲು ಸಹ ಆಸ್ಪತ್ರೆ ನಿರ್ಧರಿಸಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿ ವಾಹನ ಖರೀದಿಸಿ, ಅದನ್ನು ಒನ್ ಬಿಲಿಯನ್ ಲಿಟರೇಟ್ಸ್ ಫೌಂಡೇಷನ್ ತಂಡಕ್ಕೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಆಸ್ಪತ್ರೆ ಅಥವಾ ಕೊಳೆಗೇರಿ ಪ್ರದೇಶದಲ್ಲಿ ನಿರ್ಮಿಸಿದ ಒಪಿಡಿ ಘಟಕಕ್ಕೆ ಬರಲು ಸಾಧ್ಯವಾಗದವರಿಗೆ ಮನೆ ಬಾಗಿಲಲ್ಲಿಯೇ ಉಪಶಾಮಕ ಚಿಕಿತ್ಸೆ ಒದಗಿಸಲು ಈ ವಾಹನವನ್ನು ಬಳಿಸಿಕೊಳ್ಳಲಾಗುತ್ತದೆ. ಅದೇ ರೀತಿ, ರೋಗಿಗಳನ್ನು ಕರೆತರುವುದಕ್ಕೂ ಇದನ್ನು ಉಪಯೋಗಿಸಿಕೊಳ್ಳಲಾಗುತ್ತದೆ.