ಬೆಂಗಳೂರು: ಕುಖ್ಯಾತ ರೌಡಿ ಸ್ಲಂ ಭರತನ ನಾಲ್ವರು ಸಹಚರರನ್ನು ಬಸವೇಶ್ವರನಗರದ ಬಳಿ ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕುರುಬರಹಳ್ಳಿಯ ಪ್ರೇಮ್ ಕುಮಾರ್ (29), ಸುನಿಲ್ (30), ಅಗ್ರಹಾರ ದಾಸರಹಳ್ಳಿಯ ವಿನೋದ್ (25) ಹಾಗೂ ಕಿರಣ್ (28) ಎಂದು ಗುರುತಿಸಲಾಗಿದೆ. ಈ ನಾಲ್ವರು ಕುರುಬರಹಳ್ಳಿ ಕೆಂಪೇಗೌಡ ಆಟದ ಮೈದಾನದ ಬಳಿ ಶೇಖರಗೌಡ ಎಂಬುವರ ಮೇಲೆ ಹಲ್ಲೆ ಮಾಡಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬಂಧಿತರಾದ ಸುನಿಲ್, ವಿನೋದ್ ಹಾಗೂ ಕಿರಣ್ ಹಿಂದೆ ಶೇಖರಗೌಡ ಅವರ ಬಳಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಶೇಖರ್ಗೌಡ ಇವರನ್ನು ಕೆಲಸದಿಂದ ತೆಗೆದಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಈ ಆರೋಪಿಗಳು ದ್ವೇಷ ಸಾಧಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.