ಶುಕ್ರವಾರ, ಆಗಸ್ಟ್ 12, 2022
27 °C

ಮೆಟ್ರೊ: ನಿಲ್ದಾಣದಲ್ಲೇ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲುಗಳಲ್ಲಿ ಸಂಚರಿಸುವವರು ನಿಲ್ದಾಣದಲ್ಲಿಯೇ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಅವಕಾಶ ನೀಡಿದೆ. 

ಮೊದಲು, ನಿಗಮದ ವೆಬ್‌ಸೈಟ್‌ (webtopup.bmrc.co.in) ಅಥವಾ ನಮ್ಮ ಮೆಟ್ರೊ ಆ್ಯಪ್‌ ಮೂಲಕ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ, ಕಾರ್ಡ್‌ ಬಳಸುವುದಕ್ಕೆ ಒಂದು ಗಂಟೆಯೇ ಮುಂಚೆಯೇ ಆನ್‌ಲೈನ್‌ನಲ್ಲಿ ರಿಚಾರ್ಜ್‌ ಮಾಡಿಕೊಳ್ಳಬೇಕಾಗಿತ್ತು. ಹೊಸ ಸ್ಮಾರ್ಟ್‌ಕಾರ್ಡ್‌ ಖರೀದಿಸಿದವರಿಗೆ ಮಾತ್ರ ನಿಲ್ದಾಣದಲ್ಲಿಯೇ ರಿಚಾರ್ಜ್‌ ಮಾಡಿಕೊಡಲಾಗುತ್ತಿತ್ತು. ಟೋಕನ್‌ಗಳನ್ನು ವಿತರಿಸದ ಕಾರಣ ಮತ್ತು ಈಗಾಗಲೇ ಸ್ಮಾರ್ಟ್ ಕಾರ್ಡ್‌ ಹೊಂದಿದ್ದ ಪ್ರಯಾಣಿಕರು ಈ ನಿಯಮದಿಂದ ತೊಂದರೆ ಅನುಭವಿಸಿದರು.

ದೂರುಗಳು ಕೇಳಿ ಬಂದ ನಂತರ, ಮೆಟ್ರೊ ನಿಲ್ದಾಣದಲ್ಲಿಯೇ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಲು ನಿಗಮ ಪ್ರಾರಂಭಿಸಿದೆ. ಆದರೆ, ನಗದು ಬದಲು ‘ಡಿಜಿಟಲ್‌ ಪಾವತಿ’ ಮೂಲಕ (ಯುಪಿಐ–ಪಿಒಎಸ್‌ ಅಥವಾ ಪೇಟಿಎಂ) ಹಣ ಪಾವತಿಸಿ ರಿಚಾರ್ಜ್‌ ಮಾಡಿಕೊಳ್ಳಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು