ಬೆಂಗಳೂರು: ಮನೆಯಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೆಸರಘಟ್ಟ ಬಳಿಯ ಕಲ್ಲು ಗುಡ್ಡದಹಳ್ಳಿ ನಿವಾಸಿಗಳಾದ ಶಂಕರ್ (30), ಕುಮಾರ್ (21) ಹಾಗೂ ಶ್ರೀನಿವಾಸ್ ಬಂಧಿತರು. ಸಲ್ಫರ್ ಪೌಡರ್, ನೈಟ್ರೇಟ್, ಸ್ಫೋಟಕ ಮದ್ದು ಹಾಗೂ ರಾಸಾಯನಿಕ ಪೇಸ್ಟ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೂವರು ಆರೋಪಿಗಳು, ಬಂಡೆಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಲ್ಲು ಗುಡ್ಡದಹಳ್ಳಿಯಲ್ಲಿ ಸಣ್ಣ ಪ್ರಮಾಣದ ಕ್ವಾರಿಗಳಿದ್ದು, ಅಲ್ಲಿ ಕಲ್ಲುಗಳನ್ನು ಒಡೆಯಲು ಸ್ಫೋಟಕಗಳನ್ನು ಬಳಸಲಾಗುತ್ತಿತ್ತು. ಈ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಮನೆಯಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಬಗ್ಗೆ ಮಾಹಿತಿ ಬಂದಿತ್ತು. ಪಿಎಸ್‌ಐ ನೇತೃತ್ವದ ತಂಡ ಮನೆಯಲ್ಲಿ ಶೋಧ ನಡೆಸಿತ್ತು. ಅದೇ ಸಂದರ್ಭದಲ್ಲಿ ಸ್ಫೋಟಕಗಳು ಪತ್ತೆಯಾದವು. ಬಳಿಕ, ಮೂವರನ್ನು ಬಂಧಿಸಲಾಯಿತು.’

‘ಆರೋಪಿಗಳ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳಿಲ್ಲ. ಬಂಡೆ ಒಡೆಯಲು ಸ್ಫೋಟಕ ತಂದಿದ್ದಾಗಿ ಆರೋಪಿಗಳು ಹೇಳುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.