ಶನಿವಾರ, ಡಿಸೆಂಬರ್ 14, 2019
21 °C

ಅತ್ಯಾಧುನಿಕ ಡೆಂಟಲ್‌ ಕ್ಲಿನಿಕ್‌ಗೆ ಪುನೀತ್‌ ರಾಜ್‌ಕುಮಾರ್‌ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿ ನಗರದ ಕಾಮಾಕ್ಷಿ ಡೆಂಟಲ್‌ ಕ್ಲಿನಿಕ್‌ನಲ್ಲಿ ದಂತಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಚಿಕಿತ್ಸೆಯನ್ನು ಒಂದೇ ಭೇಟಿಯಲ್ಲಿ ಪಡೆಯುವ ಅತ್ಯಾಧುನಿಕ ವ್ಯವಸ್ಥೆಗೆ ನಟ ಪುನೀತ್‌ ರಾಜ್‌ಕುಮಾರ್‌ ಚಾಲನೆ ನೀಡಿದರು.

ವಿಶ್ವದ ಮುಂಚೂಣಿ ದಂತ ಚಿಕಿತ್ಸಾ ಉಪಕರಣಗಳ ತಯಾರಿಸುವ ಸಂಸ್ಥೆ ಡೆಂಟ್ಸ್‌ಪ್ಲೈ ಸಿರೊನಾ ಮತ್ತು ಕಾಮಾಕ್ಷಿ ಡೆಂಟಲ್‌ನ ಡಾ. ಆಕಾಶ್‌ ಸುಂದರ್‌ ಇದೇ ಮೊದಲ ಬಾರಿಗೆ ನಗರಕ್ಕೆ ಇಂಥ ಅತ್ಯಾಧುನಿಕ ಚಿಕಿತ್ಸಾ ಘಟಕವನ್ನು ಪರಿಚಯಿಸುತ್ತಿದ್ದಾರೆ. ಮುಂಚೆ ದಂತ ಚಿಕಿತ್ಸೆಗೆಂದು ಕ್ಲಿನಿಕ್‌ಗಳಿಗೆ ಮೂರು ಅಥವಾ ನಾಲ್ಕು ಬಾರಿ ಭೇಟಿ ನೀಡಬೇಕಿತ್ತು. ಈಗ ಒಂದೇ ಭೇಟಿಯಲ್ಲಿ ಎಲ್ಲ ರೀತಿಯ ಚಿಕಿತ್ಸೆಗಳನ್ನು ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು