ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ಬಳಸುತ್ತಿರುವ ಕೆಲವು ಔಷಧಗಳಲ್ಲಿ ಪ್ರಮಾಣಿತ ಗುಣಮಟ್ಟ ಇಲ್ಲದಿರುವುದು ಒಂದು ಸಮಸ್ಯೆಯಾದರೆ, ಮತ್ತೊಂದೆಡೆ ಔಷಧ ಮಾರುಕಟ್ಟೆಯಲ್ಲಿ ನಕಲಿ ಔಷಧಗಳ ಪೂರೈಕೆ ಜಾಲ ವ್ಯಾಪಕವಾಗಿದೆ. ನಕಲಿ ಔಷಧಗಳ ಮಾರಾಟದಲ್ಲಿ ಹೊರ ರಾಜ್ಯಗಳ ಕಂಪನಿಗಳು ಸಕ್ರಿಯವಾಗಿವೆ.

ಮಾರುಕಟ್ಟೆಯಲ್ಲಿ ಇರುವ ಪ್ರತಿಷ್ಠಿತ ಕಂಪನಿಗಳ ಔಷಧದ ಹೆಸರಿನಲ್ಲಿ ನಕಲಿ ಔಷಧ ಪೂರೈಸುತ್ತಿರುವುದು ರಾಜ್ಯದ ವಿವಿಧೆಡೆ ಔಷಧ ನಿಯಂತ್ರಕರು ನಡೆಸಿದ ತಪಾಸಣೆಯಿಂದ ದೃಢಪಟ್ಟಿದೆ. ಔಷಧಗಳ ಹೆಸರು ಒಂದೇ ಆಗಿದ್ದರೂ ಉತ್ಪಾದಕರು ಬೇರೆ ಬೇರೆ ಆಗಿರುವುದರಿಂದ ಔಷಧಗಳ ಮಾದರಿಗಳನ್ನು ಸಂಗ್ರಹಿಸಿ, ಇಲ್ಲಿನ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಅಸಲಿ– ನಕಲಿಯ ಪತ್ತೆ ಸಾಧ್ಯವಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಗುರುತಿಸಲಾದ ನಕಲಿ ಔಷಧ ತಯಾರಿಕಾ ಕಂಪನಿಗಳ ಪಟ್ಟಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಈ ಕಂಪನಿಗಳ 40ಕ್ಕೂ ಅಧಿಕ ನಕಲಿ ಔಷಧಗಳನ್ನು ಪತ್ತೆ ಮಾಡಲಾಗಿದೆ. 2023–24ನೇ ಸಾಲಿನಲ್ಲಿ 17 ನಕಲಿ ಔಷಧಗಳನ್ನು ಗುರುತಿಸಿದರೆ, 2024–25ನೇ ಸಾಲಿನಲ್ಲಿ (ಕಳೆದ ವರ್ಷಾಂತ್ಯಕ್ಕೆ) 26 ನಕಲಿ ಔಷಧಗಳನ್ನು ಪತ್ತೆ ಮಾಡಲಾಗಿದೆ.

ರಾಜ್ಯದ ಔಷಧ ಮಾರುಕಟ್ಟೆ ಪ್ರವೇಶಿಸುವ ಔಷಧಗಳನ್ನು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ಮಾಡುತ್ತಿದ್ದಾರೆ. ಔಷಧಗಳು ಮತ್ತು ಕಾಂತಿವರ್ಧಕ ಕಾಯ್ದೆ 1940ರ ಅಡಿ ನಕಲಿ ಔಷಧ ತಯಾರಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಔಷಧ ನಿಯಂತ್ರಕರು ನಡೆಸಿದ ತಪಾಸಣೆಯಲ್ಲಿ ಹಲವು ನಕಲಿ ಔಷಧಗಳು ಪತ್ತೆಯಾಗಿವೆ. ಅವುಗಳಲ್ಲಿ ಮೂಗಿಗೆ ಹಾಕುವ ದ್ರಾವಣ, ವಿಟಮಿನ್ ಡಿ 3 ಮಾತ್ರೆಗಳು, ನೋವು ನಿವಾರಕ ಔಷಧ ಹಾಗೂ ಸೋಂಕು ನಿವಾರಕ ದ್ರಾವಣಗಳು (ಸ್ಯಾನಿಟೈಸರ್) ಹೆಚ್ಚಾಗಿ ಸೇರಿವೆ.

ನ್ಯಾಯಾಲಯದಲ್ಲಿ ಪ್ರಕರಣ: ಔಷಧಗಳು ಮತ್ತು ಕಾಂತಿವರ್ಧಕ ಕಾಯ್ದೆ 1940ರ ಪರಿಚ್ಛೇದ 27ರ ಅಡಿ ನಕಲಿ ಔಷಧಗಳ ತಯಾರಿಕೆ, ವಿತರಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾಯ್ದೆಯಡಿ ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಕಳೆದ ಎರಡು ವರ್ಷಗಳಲ್ಲಿ ಗುರುತಿಸಲಾದ ನಕಲಿ ಔಷಧಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವುಗಳ ತನಿಖೆ ಪ್ರಗತಿಯಲ್ಲಿದೆ. ಪತ್ತೆ ಮಾಡಲಾದ ನಕಲಿ ಔಷಧ ತಯಾರಕ ಕಂಪನಿಗಳಲ್ಲಿ ಹೆಚ್ಚಿನವು ತೆಲಂಗಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಗುಜರಾತ್ಗೆ ಸೇರಿವೆ.

‘ಸಿಪಾನ್ ಡಿ’ ಔಷಧದ ನಿಗದಿತ ಬ್ಯಾಚ್ಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಜಿಡಬ್ಲ್ಯುಎಸ್ ಹೆಲ್ತ್ಕೇರ್ ಕಂಪನಿಯ ಮುಖ್ಯಸ್ಥರಿಗೆ ಚಾಮರಾಜನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಳೆದ ವರ್ಷ ಶಿಕ್ಷೆ ಪ್ರಕಟಿಸಿದ್ದು, ಒಂದು ವರ್ಷ ಜೈಲು ಹಾಗೂ ₹20 ಸಾವಿರ ದಂಡ ವಿಧಿಸಲಾಗಿದೆ. ಇದೇ ರೀತಿ, ಮೈಸೂರು ಹಾಗೂ ಬೆಂಗಳೂರಿನ ನ್ಯಾಯಾಲಯಗಳಲ್ಲಿ ತಲಾ ಒಂದೊಂದು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮವಾಗಿ ₹40 ಸಾವಿರ ಹಾಗೂ ₹65 ಸಾವಿರ ದಂಡ ವಿಧಿಸಲಾಗಿದೆ.

ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಪ್ರಕರಣಗಳು ಗಮನಕ್ಕೆ ಬಂದಿದೆ. ವಿವಿಧ ನಕಲಿ ಔಷಧಗಳನ್ನು ತಯಾರಿಸಿ ಮಾರಾಟ ಮಾಡುವ ಸಂಸ್ಥೆಗಳನ್ನು ಪತ್ತೆ ಮಾಡಿ ಮೊಕದ್ದಮೆ ಹೂಡಲಾಗುತ್ತಿದೆ
ದಿನೇಶ ಗುಂಡೂರಾವ್ ಆರೋಗ್ಯ ಸಚಿವ

- ಮೂಗು– ಕಣ್ಣಿಗೆ ಹಾಕುವ ದ್ರಾವಣವೂ ನಕಲಿ

ರಾಜ್ಯ ಔಷಧ ನಿಯಂತ್ರಣಾಧಿಕಾರಿಗಳ ಪರಿಶೀಲನೆ ವೇಳೆ ಒಂದೇ ಉತ್ಪಾದಕರು ಹಲವು ನಕಲಿ ಔಷಧಗಳನ್ನು ಮಾರುಕಟ್ಟೆಗೆ ಪೂರೈಸಿರುವುದು ದೃಢಪಟ್ಟಿದೆ. ಹಿಮಾಚಲ ಪ್ರದೇಶದ ಪುಷ್ಕರ್ ಫಾರ್ಮಾ ಎಂಬ ಕಂಪನಿಯ 17 ಔಷಧಗಳು ನಕಲಿ ಎನ್ನುವುದು ಪ್ರಯೋಗಾಲಯ ಪರೀಕ್ಷೆಗಳಿಂದ ಖಚಿತಪಟ್ಟಿದೆ. ಈ ಕಂಪನಿಯು ಮೂಗಿಗೆ ಹಾಗೂ ಕಣ್ಣಿಗೆ ಹಾಕುವ ದ್ರಾವಣವನ್ನು ಹೆಚ್ಚಾಗಿ ಮಾರುಕಟ್ಟೆಗೆ ಪೂರೈಸಿದೆ. ಔಷಧಗಳು ಮತ್ತು ಕಾಂತಿವರ್ಧಕ ಕಾಯ್ದೆ 1940ರ ಪರಿಚ್ಛೇದ 17ರ (ಬಿ) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- ‘ಫಲಿತಾಂಶ ನೀಡದ ಔಷಧ’

‘ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಉತ್ತಮ ಫಲಿತಾಂಶ ನೀಡುವ ಔಷಧಗಳ ಹೆಸರಿನಲ್ಲಿ ನಕಲಿ ಔಷಧಗಳ ಮಾರಾಟ ವ್ಯಾಪಕವಾಗಿ ನಡೆದಿದೆ. ಹೊರಗಡೆಯಿಂದ ಅಸಲಿಯಂತೆ ಕಾಣಿಸಿದರೂ ಅದು ಫಲಿತಾಂಶ ನೀಡುವುದಿಲ್ಲ. ಔಷಧದ ಗುಣ ಇಲ್ಲದಿರುವುದೇ ಇದಕ್ಕೆ ಕಾರಣ. ಆದ್ದರಿಂದ ಔಷಧ ಖರೀದಿಸುವಾಗ ಅದರ ಮೇಲಿರುವ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಬೇಕು. ವೈದ್ಯರ ಚೀಟಿ ಹೊಂದಿಯೇ ಔಷಧ ಖರೀದಿ ಮಾಡಬೇಕು. ಔಷಧ ಖರೀದಿಸಿದ ಬಳಿಕ ಕಡ್ಡಾಯವಾಗಿ ರಶೀತಿಯನ್ನೂ ಪಡೆದುಕೊಳ್ಳಬೇಕು. ನಕಲಿ ಔಷಧ ಅಥವಾ ಪ್ರಮಾಣಿತ ಗುಣಮಟ್ಟ ಹೊಂದಿರದ ಬಗ್ಗೆ ಸಂಶಯ ಇದ್ದಲ್ಲಿ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಔಷಧ ನಿಯಂತ್ರಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.