ಭಾನುವಾರ, ಜನವರಿ 19, 2020
23 °C

ತಾವರೆಕೆರೆ ತನಕ ಮೆಟ್ರೊ ಮಾರ್ಗಕ್ಕೆ ಮನವಿ; ಮುಖ್ಯಮಂತ್ರಿಗೆ ಶಾಸಕ ಸೋಮಶೇಖರ್ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾಗಡಿ ರಸ್ತೆ ಟೋಲ್‌ಗೇಟ್ ಬಳಿಯಿಂದ ತಾವರೆಕೆರೆ ತನಕ ‘ನಮ್ಮ ಮೆಟ್ರೊ‘ ರೈಲು ಮಾರ್ಗ ಕಲ್ಪಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಸೋಮವಾರ ಪತ್ರ ಬರೆದಿದ್ದಾರೆ.

‘ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಜಂಕ್ಷನ್, ಸುಂಕದಕಟ್ಟೆ, ಅಂಜನಾನಗರ, ನೈಸ್ ರಸ್ತೆ ಜಂಕ್ಷನ್, ಚನ್ನೇನಹಳ್ಳಿ ಮಾರ್ಗವಾಗಿ ತಾವರೆಕೆರೆ ತನಕ ಜನವಸತಿ ಬಡಾವಣೆಗಳಿವೆ. ಕೆಂಪೇಗೌಡ ಬಸ್ ನಿಲ್ದಾಣ, ರೈಲು ನಿಲ್ದಾಣ, ಕೆ.ಆರ್. ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಹೀಗಾಗಿ, ಮೆಟ್ರೊ ಮಾರ್ಗ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಮಾಗಡಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸುಮನಹಳ್ಳಿ ವೃತ್ತದಿಂದ ಗೊಲ್ಲರಹಟ್ಟಿ ನೈಸ್ ಜಂಕ್ಷನ್ ತನಕ ಮೇಲ್ಸೇತುವೆ ನಿರ್ಮಾಣಕ್ಕೂ ಅನುದಾನ ಮೀಸಲಿಡಬೇಕು’ ಎಂದು ಕೋರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು