ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮದತ್ತ ಒಲವು: ಉತ್ತಮ ಬೆಳವಣಿಗೆ -ಬಿ.ಬಿ.ನಾಯ್ದು

ರಾಮಯ್ಯ ಎವಲ್ಯೂಟ್ ಕಾರ್ಯಕ್ರಮ: ‘ಸ್ಟಾರ್‌ ನವೋದ್ಯಮ ಪ್ರಶಸ್ತಿ’ ಪ್ರದಾನ
Last Updated 9 ನವೆಂಬರ್ 2022, 20:57 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂಜಿನಿಯರಿಂಗ್‌ ಪದವೀಧರರು ನವೋದ್ಯಮ ಸ್ಥಾಪಿಸಲು ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದುಸ್ಟಾರ್ಟ್‌ಅಪ್‌ ಎಕ್ಸೀಡ್ ವೆಂಚರ್ ಎಲ್‍ಎಲ್‍ಪಿ ಸಂಸ್ಥಾಪಕ ಬಿ.ಬಿ.ನಾಯ್ದು ಹೇಳಿದರು.

ರಾಮಯ್ಯ ಎವಲ್ಯೂಟ್ ಬುಧವಾರ ಆಯೋಜಿಸಿದ್ದ ‘ಸ್ಟಾರ್‌ ನವೋದ್ಯಮ ಪ್ರಶಸ್ತಿ– 2022’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ದೇಶದಲ್ಲಿ ನವೋದ್ಯಮದ ಬೆಳವಣಿಗೆಗೆ ಪೂರಕವಾದ ವಾತಾವರಣ ಇದೆ. ಇದರಿಂದ ಯಶಸ್ಸು ಕಾಣಲು ಸಾಧ್ಯವಿದೆ. ಈ ಮೊದಲು ಪದವಿ ಮುಗಿಸಿದ ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದರು. ಇಂದು ಕಾಲ ಬದಲಾಗಿದೆ.ತಾವು ಬೆಳೆಯುವುದರ ಜತೆಗೆ ನವೋದ್ಯಮವನ್ನು ಬೆಳೆಸುತ್ತಿದ್ದಾರೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಸಹ ನವೋದ್ಯಮಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ವರ್ಷ ನವೋದ್ಯಮಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಇವರ ಆಯ್ಕೆಯನ್ನು ಸಹ ಕೈಗಾರಿಕೋದ್ಯಮಿಗಳಿಗೆ ನೀಡಿರುವುದು ಸರ್ಕಾರದ ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆಯನ್ನು ತೋರಿಸುತ್ತದೆ’ ಎಂದರು.

ರಾಮಯ್ಯ ಎವಲ್ಯೂಟ್‍ನ ಮುಖ್ಯಸ್ಥ ಸಮರ್ಥ ರಾಘವ ನಾಗಭೂಷಣಂ ಮಾತನಾಡಿ, ‘ಈ ಬಾರಿಯ ಪ್ರಶಸ್ತಿಗೆ ದೇಶದ ವಿವಿಧ ಭಾಗಗಳಿಂದ 182 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎರಡು ಹಂತದ ಪರಿಶೀಲನೆಗೆ ಒಳಪಡಿಸಿ 18 ಕಂಪನಿಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ. ಈ ಕಂಪನಿಗಳಿಗೆ ಗರಿಷ್ಠ ₹1 ಕೋಟಿ ಆರ್ಥಿಕ ಸಹಾಯ ಮಾಡುವುದರ ಜತೆಗೆ ಅವಶ್ಯಕ ಸೌಲಭ್ಯವನ್ನು ಒದಗಿಸುತ್ತೇವೆ’ ಎಂದು ತಿಳಿಸಿದರು.

ಗೋಕುಲ ಶಿಕ್ಷಣ ಫೌಂಡೇಷನ್ ಉಪಾಧ್ಯಕ್ಷ ಎಂ.ಆರ್.ಸೀತಾರಾಂ, ಕಾರ್ಯದರ್ಶಿ ಎಂ.ಆರ್.ರಾಮಯ್ಯ, ಎಂ.ಆರ್.ಶ್ರೀನಿವಾಸ ಮೂರ್ತಿ, ಬಿ.ಎಸ್.ರಾಮಪ್ರಸಾದ್, ಪ್ರಾಂಶುಪಾಲ ಡಾ.ಎನ್.ವಿ.ಆರ್.ನಾಯ್ಡು ಇದ್ದರು.

*
ಭಾರತದಲ್ಲಿರುವ ಉದ್ಯಮದ ವಾತಾವರಣ ಬೇರೆ ದೇಶದಲ್ಲಿ ಇಲ್ಲ. ನಮ್ಮ ಸಂಸ್ಥೆ ಪ್ರಾಯೋಗಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಪರಿಶ್ರಮಪಟ್ಟರೆ ಯಶಸ್ಸು ಕಾಣಲು ಸಾಧ್ಯ.
-ಜಯರಾಂ, ಗೋಕುಲ ಶಿಕ್ಷಣ ಫೌಂಡೇಷನ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT