ಆಸ್ತಿ ದಾಖಲೆ ಹಾಗೂ ನಕ್ಷೆಯನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್ ಆರ್‌ಎಸ್‌ಎಸಿ) ವತಿಯಿಂದ ಆನ್‌ಲೈನ್‌ನಲ್ಲೇ ಪರಿಶೀಲಿಸಿ, ಕೆರೆ, ಸರ್ಕಾರಿ ಪ್ರದೇಶಗಳ ಯಾವುದೇ ಬಫರ್ ಝೋನ್‌ನಲ್ಲಿ ಈ ಕಟ್ಟಡ ಬರುವುದಿಲ್ಲ ಎಂಬುದನ್ನು ಸ್ಪಷ್ಟೀಕರಿಸಲಾಗುತ್ತದೆ. ಆಟೊ ಡಿಸಿಆರ್ ಮೂಲಕ ವರದಿ ಸಿದ್ಧಗೊಂಡು, ಪಾವತಿ ಶುಲ್ಕದ ವಿವರ ನೀಡಲಾಗುತ್ತದೆ. ಇ–ಪೇಮೆಂಟ್ ಮಾಡಿದ ಕೂಡಲೇ ತಾತ್ಕಾಲಿಕ ನಕ್ಷೆ ಹಾಗೂ ಅನುಮತಿ ಪತ್ರವನ್ನು ನೀಡಲಾಗುತ್ತದೆ.