ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು ನಿರ್ಧರಿಸಿರುವ ನಗರ ಪಾಲಿಕೆಗಳು, ಪ್ರತಿಯೊಂದು ಬೀದಿ ನಾಯಿಗೆ ತಿಂಗಳಿಗೆ ₹3,035 ವೆಚ್ಚ ಮಾಡಲು ನಿರ್ಧರಿಸಿವೆ.

ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ಕೇಂದ್ರಗಳಿಗೆ ಸಾಗಿಸಿ, ಅಲ್ಲಿ ನಿರ್ವಹಣೆ ಮಾಡಲು ಎನ್ಜಿಒ ಹಾಗೂ ಸಂಸ್ಥೆಗಳಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಟೆಂಡರ್ ಆಹ್ವಾನಿಸಿದೆ.

ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (ಅಂದಿನ ಬಿಬಿಎಂಪಿ) 2.79 ಲಕ್ಷ ಬೀದಿ ನಾಯಿಗಳಿವೆ ಎಂದು 2023ರ ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಿದ ಅಂಕಿ–ಅಂಶಗಳಿಂದ ತಿಳಿದುಬಂದಿತ್ತು. ಬೆಂಗಳೂರು ದಕ್ಷಿಣ ನಗರ ಪಾಲಿಕೆ 100 ಬೀದಿ ನಾಯಿಗಳನ್ನು ಹಿಡಿಯುವುದು ಹಾಗೂ ಅವುಗಳಿಗೆ ಆಹಾರ, ಆಶ್ರಯ ಕೇಂದ್ರ ನಿರ್ವಹಣೆಯನ್ನು ಲೆಕ್ಕ ಮಾಡಿ, 500 ಬೀದಿ ನಾಯಿಗಳನ್ನು ಹಿಡಿದು, ನಿರ್ವಹಣೆ ಮಾಡಲು ಟೆಂಡರ್ ಆಹ್ವಾನಿಸಿದೆ.

ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಲಸಿಕೆ ನೀಡಿ, ಆಶ್ರಯ ಕೇಂದ್ರಗಳಿಗೆ ವರ್ಗಾಯಿಸಬೇಕು. ಅದಾದ ಮೇಲೆ, ಆಶ್ರಯ ಕೇಂದ್ರದಲ್ಲಿ ದಿನಕ್ಕೆ ಎರಡು ಬಾರಿ ಆಹಾರ ನೀಡಬೇಕು. ಒಬ್ಬ ಅರೆ ಪಶುವೈದ್ಯ, ನಾಲ್ವರು ಅಟೆಂಡರ್ ಸೇರಿ ಐವರು ಸಿಬ್ಬಂದಿಯ ವೇತನ, ವೈದ್ಯಕೀಯ ವೆಚ್ಚ, ಸ್ವಚ್ಛತಾ ಸಾಮಗ್ರಿ, ಆಡಳಿತ ವೆಚ್ಚವನ್ನು ನಿಗದಿ ಮಾಡಿ ಪ್ರತಿ ಬೀದಿ ನಾಯಿಗೆ ಒಂದು ತಿಂಗಳಿಗಾಗುವ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಆ ವೆಚ್ಚವನ್ನು ಪ್ರತಿ ವರ್ಷ ಶೇ 5ರಷ್ಟು ಹೆಚ್ಚಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.