ಸೋಮವಾರ, ಫೆಬ್ರವರಿ 17, 2020
16 °C

ಯುವಕ ಆತ್ಮಹತ್ಯೆ: ಹುಡುಗಿ ಪೋಷಕರ ಬೆದರಿಕೆ; ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಟಿಸಿಎಲ್‌ನ ಹೂಡಿ ಕಚೇರಿಯಲ್ಲಿ ಆಪರೇಟರ್ ಆಗಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಎಚ್‌. ದರ್ಶನ್ ಕುಮಾರ್‌ (25) ಎಂಬುವರು ನಗರದ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಪ್ರೀತಿಸುತ್ತಿದ್ದ ಯುವತಿಯ ಪೋಷಕರು ಮಾಡಿದ ಅವಮಾನ ಮತ್ತು ಬೆದರಿಕೆಯಿಂದ ನೊಂದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಆರೋಪಿಸಿ ಹೆಣ್ಣೂರು ಠಾಣೆಯಲ್ಲಿ ದರ್ಶನ್‌ ತಮ್ಮ ಪ್ರಜ್ವಲ್‌ ಗೌಡ ದೂರು ನೀಡಿದ್ದಾರೆ.

‘ಫೆ.2ರಂದು ಊರಿಗೆ ಬಂದಿದ್ದ ಅಣ್ಣ, ತಾನು ಪ್ರೀತಿಸುತ್ತಿರುವ ಹುಡುಗಿಗೆ ನಿಶ್ಚಿತಾರ್ಥ ಆಗಿದೆ. ಆಕೆಯ ಪೋಷಕರು ಕರೆ ಮಾಡಿ ಜೀವಬೆದರಿಕೆ ಹಾಕುತ್ತಿದ್ದಾರೆ ಎಂದಿದ್ದ. ಫೆ. 3ರಂದು ಮತ್ತೆ ಕೆಲಸಕ್ಕೆ ತೆರಳಿದ್ದ. ಫೆ. 6ರಂದು ಮಧ್ಯಾಹ್ನ ಆತ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು