ಭಾನುವಾರ, ಮಾರ್ಚ್ 7, 2021
30 °C
ಸರ್ವಿಸ್ ರಸ್ತೆಗಳನ್ನು ಬಿಡದೆ ಟೋಲ್ ಸುಂಕ ವಸೂಲಿ ಮಾಡುತ್ತಿರುವುದಕ್ಕೆ ಖಂಡಿನೆ

ಫಾಸ್ಟ್‌ ಟ್ಯಾಗ್ ಕಡ್ಡಾಯ: ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯ ದಾಸರಹಳ್ಳಿ: ಟೋಲ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಕಡ್ಡಾಯ ವಿರೋಧಿಸಿ ಹಾಗೂ ಸರ್ವಿಸ್ ರಸ್ತೆಗಳನ್ನು ಬಿಡದೆ ಟೋಲ್ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ 8ನೇ ಮೈಲಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, 'ಸ್ಥಳೀಯ ವಾಹನ ಸವಾರರಿಗೆ ಫಾಸ್ಟ್‌ ಟ್ಯಾಗ್‌ನಿಂದ ವಿನಾಯತಿ ಕೊಡಬೇಕು ಸರ್ವಿಸ್ ರಸ್ತೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗುತ್ತಿದೆ. ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನದಲ್ಲಿ ರಾಜ್ಯದ ಎಲ್ಲ ಟೋಲ್ ಪ್ಲಾಜಾ ಮುಂದೆ ಹೋರಾಟ ನಡೆಸಲಾಗುತ್ತದೆ' ಎಂದು ತಿಳಿಸಿದರು.

ಸಂಘಟನೆಯ ನಗರ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಶ್ರೀನಿವಾಸ್ ಮಾತನಾಡಿ, ’ ಸಾರ್ವಜನಿಕರಿಂದ ದುಪ್ಪಟ್ಟು ಸುಂಕ ವಸೂಲಿ ಮಾಡುತ್ತಿದ್ದಾರೆ. ನಾಮಫಲಕಗಳಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ. ಕಚೇರಿಗಳಲ್ಲಿ ಸರಿಯಾಗಿ ಕನ್ನಡ ಮಾತನಾಡುವರು ಕೂಡ ಇರುವುದಿಲ್ಲ' ಎಂದು ದೂರಿದರು.

ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ಡಿ. (ವೆಂಕಿ), ಕ್ಷೇತ್ರ ಅಧ್ಯಕ್ಷ ವಿಜಯಕುಮಾರ್, ರಾಜ್ಯ ಸಂಚಾಲಕ ಪ್ರಕಾಶ್ ಗೌಡ, ರಾಜ್ಯ ಉಪಾಧ್ಯಕ್ಷ ಉದಯ ಶೆಟ್ಟಿ, ಕ್ಷೇತ್ರದ ಕಾರ್ಯದರ್ಶಿ ಮಧು ಗೌಡ, ಯೋಗೇಶ್ ಬಾಬು, ಜಯರಾಮ್, ಶಾರದಾ ಸಿಂಗ್, ರೇಖಾ ಮುಂತಾದವರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು