ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಮಿನಾಥನ್‌ ವರದಿ’ ಜಾರಿಗೆ ಆಗ್ರಹ: ರೈತರ ಪ್ರತಿಭಟನೆ

ಉತ್ಸವದಲ್ಲಿ 125ಕ್ಕಿಂತ ಹೆಚ್ಚು ಮಳಿಗೆ
Last Updated 18 ಜೂನ್ 2018, 14:10 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂ.ಎಸ್‌.ಸ್ವಾಮಿನಾಥನ್‌ ವರದಿ ಜಾರಿಗೊಳಿಸಿ’, ‘ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಕಾಯ್ದೆ ಜಾರಿ’ ಮಾಡುವಂತೆ ರೈತರು ಮತ್ತು ಕಾರ್ಮಿಕರು ಘೋಷಣೆ ಕೂಗಿ ಸರ್ಕಾರವನ್ನು ಒತ್ತಾಯಿಸಿದರು.

ಮಂಡ್ಸೌರ್ ರೈತ ಹುತಾತ್ಮರ ಸ್ಮರಣೆಯ ಅಂಗವಾಗಿ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ), ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ‘ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ' ಹಾಗೂ 'ಋಣ ಮುಕ್ತ ಕಾಯ್ದೆ'ಗಾಗಿ ಬುಧವಾರ, ರೇಸ್‌ಕೋರ್ಸ್ ರಸ್ತೆಯ ಮೌರ್ಯ ಹೊಟೇಲ್ ಹತ್ತಿರ ಪ್ರತಿಭಟನಾ ಧರಣಿ ನಡೆಸಿತು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ‘ಮುಂದಿನ ದಿನಗಳಲ್ಲಿ ಹತ್ತು ದಿನಗಳ (ಇನ್ನೂ ದಿನಾಂಕ ನಿಗದಿಪಡಿಸಿಲ್ಲ) ಕಾಲ ಕೃಷಿ ಉತ್ಪನ್ನಗಳನ್ನು ನಗರಕ್ಕೆ ತರದಂತೆ ತಡೆಹಿಡಿಯುತ್ತೇವೆ. ಈ ಮೂಲಕ ನಗರದ ಜನತೆ ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಿದ್ದೇವೆ’ ಎಂದರು.

ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀಸುವ ಮಳಿಗೆ ವರ್ಷಪೂರ್ತಿ ತೆರೆದಿರಬೇಕು, ಪ್ರಕೃತಿ ವಿಕೋಪಕ್ಕೆ ಬೆಳೆ ನಾಶವಾದಲ್ಲಿ ತಡ ಮಾಡದೆ ಶೀಘ್ರ ಪರಿಹಾರ ಒದಗಿಸಬೇಕು. ಹಳ್ಳಿಗರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಶೇಕಡ 63 ರಷ್ಟು ಮೀಸಲಿಡಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧ ಹಳ್ಳಿಗಳಿಗೆ ವಿಸ್ತರಿಸುವಂತಹ ತೀವ್ರ ಚಳವಳಿ ಪ್ರಾರಂಭಬಾಗಲಿದೆ ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ರೈತ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT