ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಿಗ್ಗಿ’ ಬಾಯ್ ಸುಲಿಗೆ: ಆರೋಪಿ ಬಂಧನ

Last Updated 12 ಜನವರಿ 2022, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಿಗ್ಗಿ’ ಆ್ಯಪ್‌ ಮೂಲಕ ಆಹಾರ ಪೂರೈಸುವ ಡೆಲಿವರಿ ಬಾಯ್‌ಯೊಬ್ಬರನ್ನು ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಗುನ್ನಾಲ್ (25) ಎಂಬಾತನನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಗ್ರಾಹಕರೊಬ್ಬರಿಗೆ ಆಹಾರದ ಪೊಟ್ಟಣ ಕೊಟ್ಟು ಡೆಲಿವರಿ ಬಾಯ್‌ ವಾಪಸು ಮನೆಗೆ ಹೊರಟಿದ್ದಾಗ ಅಡ್ಡಗಟ್ಟಿ ಸುಲಿಗೆ ಮಾಡಲಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಸುಲಿಗೆ ಮಾಡಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಚಂದ್ರು ತಲೆಮರೆಸಿಕೊಂಡಿದ್ದಾನೆ’ ಎಂದೂ ತಿಳಿಸಿದರು.

ಹಿಂಬಾಲಿಸಿ ಕೃತ್ಯ: ‘ಅಪರಾಧ ಹಿನ್ನೆಲೆಯುಳ್ಳ ಗುನ್ನಾಲ್ ಹಾಗೂ ಚಂದ್ರು, ಸ್ವಿಗ್ಗಿ ಬಾಯ್‌ ಅವರನ್ನು ಹಿಂಬಾಲಿಸಿದ್ದರು. ಅವರ ಬಳಿ ಹಣವಿರಬಹುದೆಂದು ತಿಳಿದು, ಅದನ್ನು ಕಿತ್ತುಕೊಳ್ಳಲು ದ್ವಿಚಕ್ರ ವಾಹನ ಅಡ್ಡಗಟ್ಟಿದ್ದರು. ಹಣವಿಲ್ಲದಿದ್ದಾಗ ವಾಹನ ಹಾಗೂ ಮೊಬೈಲ್‌ ಸುಲಿಗೆ ಮಾಡಿಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT