ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಟ್ಯಾಪ್‌ರೂಟ್‌ ವಿದ್ಯಾಸಂಸ್ಥೆಗಳ ಕ್ರೀಡಾಮೇಳ ಸಂಭ್ರಮ

Published 3 ಸೆಪ್ಟೆಂಬರ್ 2023, 16:23 IST
Last Updated 3 ಸೆಪ್ಟೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ಟ್ಯಾಪ್‌ರೂಟ್‌ ವಿದ್ಯಾಸಂಸ್ಥೆಗಳ ಬೃಹತ್ ಕ್ರೀಡಾಮೇಳ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು.

ಏಷ್ಯನ್‌ ಪ್ಯಾರಾ ಗೇಮ್ಸ್‌ ಚಿನ್ನದ ಪದಕ ವಿಜೇತೆ ರಕ್ಷಿತಾ ರಾಜು, 17ನೇ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಸುಶ್ಮಿತಾ ಪವರ್‌, ದಿ ಪ್ರಿಂಟರ್ಸ್‌ ಮೈಸೂರ್‌ ಪ್ರೈ ಲಿ.ನ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಕಿರಣ್‌ ಸುಂದರ್‌ ರಾಜನ್‌ ಕ್ರೀಡಾಮೇಳಕ್ಕೆ ಚಾಲನೆ ನೀಡಿದರು. 

ಟ್ಯಾಪ್‌ರೂಟ್‌ ವಿದ್ಯಾಸಂಸ್ಥೆಗಳ ನಿರ್ದೇಶಕ ಶ್ರೀಧರ್‌, ಸಹ ನಿರ್ದೇಶಕ ಹರಿಸರ್ವೋತ್ತಮ್‌ ರೆಡ್ಡಿ, ಶೈಕ್ಷಣಿಕ ವಿಜ್ಞಾನ ಸಂಯೋಜಕ ರಘುನಂದನ್‌, ಬಿಜಿನೆಸ್‌ ಹೆಡ್‌ ವೈಭವ್‌ ಕುಮಾರ್‌ ಸಿಂಗಾಲ್‌ ಶುಭ ಹಾರೈಸಿದರು.

ಟ್ಯಾಪ್‌ರೂಟ್‌ ಸಂಸ್ಥೆಯ 8 ಕಾಲೇಜುಗಳ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT