ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ಶಿಕ್ಷಣ: ಉದ್ಯೋಗಕ್ಕೆ ಆದ್ಯತೆ

ಯುವಜನತೆಯನ್ನು ಕೆಲಸಯೋಗ್ಯರನ್ನಾಗಿ ಮಾಡುವ ಚಿಂತನೆ ಇದೆ: ಸಿ.ಎಂ
Last Updated 5 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ಕ್ರಮವನ್ನು ಅಳವಡಿಸುವ ಮೂಲಕ ಯುವಜನತೆಯನ್ನು ಕೆಲಸಯೋಗ್ಯರನ್ನಾಗಿ ಮಾಡುವ ಚಿಂತನೆ ಸರ್ಕಾರಕ್ಕೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ವಿಧಾನಸೌಧದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಉಪನ್ಯಾಸಕರಿಗೇ ಕಾರ್ಯಾಗಾರಗಳನ್ನು ಏರ್ಪಡಿಸಿ, ಉನ್ನತ ಶಿಕ್ಷಣದ ಸಾಮರ್ಥ್ಯ, ಗುಣಮಟ್ಟ ಹೆಚ್ಚಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ‘ ಎಂದರು.

ಉನ್ನತ ಶಿಕ್ಷಣ ವಲಯದಲ್ಲಿ ದೇಶದ ಸರಾಸರಿ ಶೇ 25ರಷ್ಟಿದ್ದು, ರಾಜ್ಯದಲ್ಲಿ ಶೇ 27.8ರಷ್ಟಿದೆ. 2040ರ ವೇಳೆಗೆ ಈ‍ ಪ್ರಮಾಣವನ್ನು ಶೆ 48ಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯಲ್ಲಿನಭ್ರಷ್ಟಾಚಾರವನ್ನು ನಿಗ್ರಹಿಸಿ, ಪಾರ ದರ್ಶಕ ಆಡಳಿತ ತರುವ ಪ್ರಯತ್ನ ನಡೆಯಲಿದೆ ಎಂದು ಉಪಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

‘ಅಧ್ಯಾಪಕರು, ಪ್ರಾಂಶುಪಾಲರ ನೇಮಕಾತಿ, ವರ್ಗಾವಣೆ, ಕಾಲೇಜುಗಳ ಸಂಯೋಜನೆ ವಿಚಾರದಲ್ಲಿ ಪಾರ ದರ್ಶಕತೆ ತರಲಾಗುವುದು. ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಅಲೆಯುವುದನ್ನು ತಪ್ಪಿಸಲು ಹಾಗೂ ಕುಲಪತಿಗಳ ನೇಮಕಾತಿ ವಿಚಾರದಲ್ಲಿಯೂ ಪಾರ ದರ್ಶಕತೆ ತರಲಾಗುವುದು’ ಎಂದರು.

ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡಲು ಸೀಮಿತವಾಗದೆ ಪರಿಪೂರ್ಣತೆ ಕೊಡುವ ಕೇಂದ್ರವಾಗಬೇಕು. ಅತಿ ವೃಷ್ಟಿಗೆ ಒಳಗಾದ ಪ್ರದೇಶಗಳಲ್ಲೂ ಉತ್ತಮ ಶಿಕ್ಷಣ ನೀಡುವ ಬಗ್ಗೆ ಗಮನ ಹರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT