ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಲಾಲ್ಬಾಗ್ನಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು– ಬರಹಗಳು ‘ತೇಜಸ್ವಿ ವಿಸ್ಮಯ’ ಶೀರ್ಷಿಕೆ ಅಡಿಯಲ್ಲಿ ಹೂವಿನಲ್ಲಿ ಅರಳಲಿವೆ.

ಗಣರಾಜ್ಯೋತ್ಸವ ಅಂಗವಾಗಿ 2026ರ ಜನವರಿ 15ರಿಂದ 26ರವರೆಗೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ಈಗಾಗಲೇ ವಿವಿಧ ಬಗೆಯ ಆಲಂಕಾರಿಕ, ದೇಶಿ-ವಿದೇಶಿ ಹೂವುಗಳ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗಾಜಿನ ಮನೆಯಲ್ಲಿ ತೇಜಸ್ವಿ ಅವರ ಪುತ್ಥಳಿ, ‘ನಿರುತ್ತರ’ದ ಅವರ ಮನೆ, ನಿಸರ್ಗದ ಮಡಿಲಿನಲ್ಲಿ ಇರುವ ಬೃಹತ್ ಬೆಟ್ಟದ ಮಾದರಿ ನಿರ್ಮಾಣ, ಕೃತಕವಾಗಿ ನಿರ್ಮಿಸುವ ಕಾಡಿನಲ್ಲಿ ತೇಜಸ್ವಿ ಅವರ ಭಾವಚಿತ್ರ ರೂಪಿಸಲಾಗುತ್ತದೆ. ಇದರ ಜೊತೆಗೆ ಜೇನುಗೂಡು, ಝರಿ, ಕೆರೆ, ತೇಜಸ್ವಿ ಅವರು ಶಿಕಾರಿಗೆ ತೆರಳುವ ಮಾದರಿಗಳನ್ನು ನಿರ್ಮಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆʼ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ʼಕಾಡು, ಚಿಟ್ಟೆ, ಕೀಟ ಪ್ರಪಂಚ, ಹಕ್ಕಿಗಳು, ಕರ್ವಾಲೊ ಕಾದಂಬರಿಯಲ್ಲಿ ಬರುವ ಕಿವಿ ಎಂಬ ನಾಯಿ, ಕೃಷ್ಣೇಗೌಡರ ಆನೆ, ತೇಜಸ್ವಿ ಅವರ ಸ್ಕೂಟರ್, ಜೀಪು ಸೇರಿದಂತೆ ಅವರ ಜೀವನದ ಪ್ರಮುಖ ಘಟನೆಗಳ ಮಾಹಿತಿ ನೀಡುವ ಛಾಯಾಚಿತ್ರಗಳು, ಸಂಕ್ಷಿಪ್ತ ಮಾಹಿತಿ ಒದಗಿಸುವ ಬ್ಯಾನರ್ಗಳನ್ನು ಅಳವಡಿಸಲಾಗುತ್ತದೆʼ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ʼಪ್ರಜಾವಾಣಿʼಗೆ ತಿಳಿಸಿದರು.

ʼತೇಜಸ್ವಿ ಅವರು ರಚಿಸಿದ ನಾಟಕಗಳ ಪ್ರದರ್ಶನ, ತೇಜಸ್ವಿ ಒಡನಾಡಿಗಳು, ಕುಟುಂಬದವರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ತೇಜಸ್ವಿ ಅವರ ಮಾಯಾಲೋಕವನ್ನು ಇಂದಿನ ಯುವ ಸಮುದಾಯಕ್ಕೆ ಪರಿಚಯಿಸಲಾಗುತ್ತದೆʼ ಎಂದು ಹೇಳಿದರು.

ʼತೇಜಸ್ವಿ ಅವರ ಜೀವನಾಧಾರಿತ ಪುಷ್ಪ ಪ್ರದರ್ಶನದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದರ ಕುರಿತು ತೇಜಸ್ವಿ ಪ್ರತಿಷ್ಠಾನ ಹಾಗೂ ಕುವೆಂಪು ಪ್ರತಿಷ್ಠಾನದ ಪದಾಧಿಕಾರಿಗಳು, ತೇಜಸ್ವಿ ಅವರ ಮಕ್ಕಳು ಹಾಗೂ ಒಡನಾಡಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಒಂದು ವಾರದಲ್ಲಿ ರೂಪರೇಷಗಳನ್ನು ಸಿದ್ಧಪಡಿಸಲಾಗುವುದುʼ ಎಂದರು.

ʼತೇಜಸ್ವಿ ಅವರಿಗೆ ಸಂಬಂಧಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ, ಅವರ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ, ಅವರು ನೀಡಿರುವ ಸಂದರ್ಶನಗಳನ್ನು ಎಲ್ಇಡಿ ಪರದೆಗಳ ಮೇಲೆ ಪ್ರಸಾರ ಮಾಡಲಾಗುತ್ತದೆʼ ಎಂದು ಹೇಳಿದರು.

ನಿಸರ್ಗದ ಮಡಿಲಲ್ಲಿ ತೇಜಸ್ವಿ ಅವರು ಬದುಕಿದ ಪರಿಯನ್ನು ಪುಷ್ಪಗಳ ಮೂಲಕ ಅನಾವರಣ ಮಾಡಲಾಗುತ್ತದೆ.

50 ಸಾವಿರ ಹೂವಿನ ಕುಂಡ

‘ಫಲಪುಷ್ಪ ಪ್ರದರ್ಶನಕ್ಕಾಗಿ ಕಬ್ಬನ್ ಉದ್ಯಾನ, ಕೆಮ್ಮಣ್ಣುಗುಂಡಿ, ಊಟಿಯ ಉದ್ಯಾನಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಬೆಳಸಲಾಗುತ್ತಿದೆ. ಇದರ ಜೊತೆಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ವಿವಿಧ ಬಗೆಯ ಹೂವುಗಳನ್ನು ತರಿಸಲಾಗುತ್ತದೆ. ಸೇವಂತಿಗೆ, ಗುಲಾಬಿ, ಪಾಯಿನ್ಸಿಟಿಯಾ, ಪೆಂಟಾಸ್, ಜರ್ಬೇರಾ, ಜಿರೇನಿಯಂ ಇತ್ಯಾದಿ ಹೂವುಗಳು ನೋಡಗರನ್ನು ಸೆಳೆಯಲಿವೆ’ ಎಂದು ಎಂ. ಜಗದೀಶ್ ತಿಳಿಸಿದರು.

ವಿಶಿಷ್ಟ ಬರಹದ ಮೂಲಕ ಲಕ್ಷಾಂತರ ಓದುಗರನ್ನು ಸೆಳೆದಿರುವ ತೇಜಸ್ವಿ ಸಾಹಿತ್ಯದ ಜೊತೆಗೆ ಹತ್ತಾರು ಮುಖಗಳನ್ನು ನೋಡಬಹುದು. ಅವರ ಬದುಕನ್ನು ನಿಸರ್ಗದೊಂದಿಗೆ ಪ್ರಸ್ತುತ ಪಡಿಸಲಾಗುವುದು
ಎಂ. ಜಗದೀಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.