ಸೋಮವಾರ, ಜೂನ್ 27, 2022
26 °C

ನಿಮ್ಹಾನ್ಸ್: ರೋಗಿಗಳಿಗೆ ದೂರವಾಣಿ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಕಾರಣ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಈಗಾಗಲೇ ಚಿಕಿತ್ಸೆ ಪಡೆದಿರುವ ಹಳೆಯ ರೋಗಿಗಳಿಗೆ ನೆರವಾಗಲು ದೂರವಾಣಿ ಸೇವೆ ಆರಂಭಿಸಿದೆ.

ಕೋವಿಡ್ 2ನೇ ಅಲೆ ಬಳಿಕ ಆಸ್ಪತ್ರೆ ಚಿಕಿತ್ಸೆ ಅಗತ್ಯ ಇರುವವರಿಗೆ ಕೋವಿಡ್ ಪರೀಕ್ಷೆ ನಡೆಸಿ, ಅಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ.

‌‘ಮಾನಸಿಕ ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಲಕ್ಷಾಂತರ ಮಂದಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಹಲವರು ಫಾಲೋ ಅಪ್ ಚಿಕಿತ್ಸೆ ಯಲ್ಲಿದ್ದಾರೆ. ಕೋವಿಡ್, ಲಾಕ್‌ಡೌನ್ ಕಾರಣ ಸಂಸ್ಥೆಗೆ ಬಂದು ಆರೋಗ್ಯ ಸೌಲಭ್ಯ ಪಡೆಯಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತ್ಯೇಕ ದೂರವಾಣಿ ಸಂಖ್ಯೆಯನ್ನು ಮೀಸಲಿಡಲಾಗಿದೆ. ಸೇವೆ ಅಗತ್ಯ ಇರುವವರು ಕರೆ ಮಾಡಿ, ಸಲಹೆ ಗಳನ್ನು ಪಡೆಯಬಹುದು’ ಎಂದು ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾ ಗದ ಪ್ರಾಧ್ಯಾಪಕ ಡಾ. ಜಗದೀಶ್ ತೀರ್ಥಳ್ಳಿ ತಿಳಿಸಿದ್ದಾರೆ.

‘ವೈದ್ಯರು ರೋಗಿಗಳ ಸಮಸ್ಯೆ ಯನ್ನು ದೂರವಾಣಿ ಮೂಲಕ ಆಲಿಸಿ, ಚಿಕಿತ್ಸೆ, ಔಷಧ ಸೂಚಿಸಲಿದ್ದಾರೆ. ಈ ಸೇವೆಯು ಈಗಾಗಲೇ ಸಂಸ್ಥೆಯಲ್ಲಿ ನೋಂದಾಯಿತರಾದ (ಈ ಹಿಂದೆ ಚಿಕಿತ್ಸೆ ಪಡೆದ) ರೋಗಿಗಳಿಗೆ ಮಾತ್ರ ಲಭ್ಯವಿರಲಿದೆ’ ಎಂದು ಹೇಳಿದ್ದಾರೆ.

ದೂರವಾಣಿ: 080 4680 1771 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 4).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು