ಬೆಂಗಳೂರು: ಎರಡನೇ ಪತ್ನಿಯನ್ನು ಬಿಟ್ಟು ಬರುವಂತೆ ಹೇಳಿ, ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸೈಯದ್ ಅಸ್ಗರ್ಗೆ ಮೊದಲ ಪತ್ನಿ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.

ಸೈಯದ್ ಕೈಗೆ ಗಂಭೀರ ಗಾಯವಾಗಿದ್ದು ಕಣ್ಣಿನ ಭಾಗಕ್ಕೂ ಪೆಟ್ಟು ಬಿದ್ದಿದ್ದೆ. ಅವರು ಮೊದಲ ಪತ್ನಿಯ ವಿರುದ್ಧ ಜೆ.ಜೆ ನಗರ ಠಾಣೆಗೆ ದೂರು ನೀಡಿದ್ದಾರೆ.

ಮೊದಲ ಪತ್ನಿ ಬೆದರಿಕೆ ಹಾಕಿ ವಿಡಿಯೊ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೈಲಿಗೆ ಹೋಗಿದ್ದ ಸೈಯದ್ ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದರು.

‘ದೂರು ಸ್ವೀಕರಿಸಿ ತನಿಖೆ ನಡೆಸಲಾಗುತ್ತಿದೆ. ಎರಡನೇ ಪತ್ನಿಯನ್ನು ಬಿಟ್ಟು ಬರುವಂತೆ ಹೇಳಿ ಮೊದಲ ಪತ್ನಿ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.