ಭಾನುವಾರ, ಜನವರಿ 19, 2020
29 °C
ಲೆಕ್ಕಪರಿಶೋಧಕ ವಿದ್ಯಾರ್ಥಿ ಸಮ್ಮೇಳನ

‘ಉದ್ಯಮದ ಯಶಸ್ಸಿನಲ್ಲಿ ಸಿ.ಎಗಳ ಪಾತ್ರ ದೊಡ್ಡದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಲೆಕ್ಕಪರಿಶೋಧಕರು (ಸಿಎ) ಇಂತಹ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡರೆ ಅವರನ್ನು ಅವಲಂಬಿಸಿದ ಉದ್ಯಮಗಳು ಯಶಸ್ಸು ಕಾಣುತ್ತವೆ’ ಐಐಎಂನ
ಪ್ರೊ. ಕೆ. ಕುಮಾರ್‌ ಅಭಿಪ್ರಾಯಪಟ್ಟರು. 

ಇಲ್ಲಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಲೆಕ್ಕಪರಿಶೋಧಕ ವಿದ್ಯಾರ್ಥಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಲೆಕ್ಕ ಪರಿಶೋಧಕರು ಆರ್ಥಿಕ ಚಟುವಟಿಕೆಗಳನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದರು. 

ಐಸಿಎಐನ ಮಾಜಿ ಅಧ್ಯಕ್ಷ ಕೆ. ರಘು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಐಆರ್‌ಸಿ ಮುಖ್ಯಸ್ಥ ಜೋಮನ್ ಕೆ. ಜಾರ್ಜ್, ಪದಾಧಿಕಾರಿಗಳಾದ ಎಸ್. ಪನ್ನಾ ರಾಜ್, ಎ.ಬಿ. ಗೀತಾ, ಶಿವರಾಮ್ ಶಂಕರ್ ಭಟ್, ಎಸ್ಐಸಿಎಎಸ್ಎನ ಅಧ್ಯಕ್ಷೆ ಎಸ್. ದಿವ್ಯಾ ಮೊದಲಾದವರು ಉಪಸ್ಥಿತರಿದ್ದರು. 

ಪ್ರತಿಕ್ರಿಯಿಸಿ (+)