ಮಂಗಳವಾರ, ಸೆಪ್ಟೆಂಬರ್ 21, 2021
24 °C

ಪ್ರಜ್ಞೆ ತಪ್ಪಿಸಿ ಚಿನ್ನದ ಸರ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಆರ್.ಪುರ ಬಳಿ ವೃದ್ಧೆಯೊಬ್ಬರ ಪ್ರಜ್ಞೆ ತಪ್ಪಿಸಿದ್ದ ಮಹಿಳೆಯೊಬ್ಬಳು, ₹ 95 ಸಾವಿರ ಮೌಲ್ಯದ ಚಿನ್ನದ ಸರ ಕದ್ದೊಯ್ದಿದ್ದಾಳೆ.

ದುರ್ಗಾಪರಮೇಶ್ವರಿ ದೇವಸ್ಥಾನ ಬಳಿ ಜೂನ್‌ 18ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಆ ಸಂಬಂಧ ವೃದ್ಧೆ ಜಯಲಕ್ಷ್ಮಿ, ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದಾರೆ.

‘ಜಯಲಕ್ಷ್ಮಿ ಅವರು ಮಗಳ ಜೊತೆ ಮಾರುಕಟ್ಟೆಗೆ ಹೋಗಿದ್ದರು. ಕೆಲಸವಿದ್ದಿದ್ದರಿಂದ ಮಗಳು, ಅಲ್ಲಿಂದಲೇ ಬ್ಯಾಂಕ್‌ಗೆ ತೆರಳಿದ್ದರು. ವೃದ್ಧೆಯೊಬ್ಬರೇ ನಡೆದುಕೊಂಡು ಮನೆಯತ್ತ ಹೊರಟಿದ್ದರು. ಎದುರಿಗೆ ಬಂದಿದ್ದ ಮಹಿಳೆ, ಕೃತ್ಯ ಎಸಗಿ ಪರಾರಿಯಾಗಿದ್ದಾಳೆ’ ಎಂದು ಪೊಲೀಸರು ಹೇಳಿದರು.

‘ವೃದ್ಧೆಯನ್ನು ಮಾತನಾಡಿಸಿದ್ದ ಮಹಿಳೆ, ‘ನನ್ನ ಮಗಳು ನಾಲ್ಕು ತಿಂಗಳ ಗರ್ಭಿಣಿ. ಆಕೆಯ ಆರೋಗ್ಯ ತಪಾಸಣೆಗೆ ಉತ್ತಮ ಆಸ್ಪತ್ರೆ ಯಾವುದಿದೆ’ ಎಂದು ಕೇಳಿದ್ದಳು. ‘ದೀಪಾ ಆಸ್ಪತ್ರೆ ಇದೆ’ ಎಂದಿದ್ದ ವೃದ್ಧೆ, ಆರೋಪಿಯನ್ನು ಕರೆದುಕೊಂಡು ಮುಂದಕ್ಕೆ ಸಾಗುತ್ತಿದ್ದರು. ಅದೇ ವೇಳೆ ಮುಖದ ಮೇಲೆ ಯಾವುದೋ ಔಷಧಿ ಸಿಂಪಡಿಸಿದ ಅನುಭವ ವೃದ್ಧೆಗೆ ಆಗಿತ್ತು. ನಂತರ, ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಅವರು ದೂರು ನೀಡಿದ್ದಾರೆ’ ಎಂದರು.

‘ಕೆಲ ಹೊತ್ತಿನ ನಂತರ ಎಚ್ಚರವಾದಾಗ ವೃದ್ಧೆಯ ಕೊರಳಲ್ಲಿ ಚಿನ್ನದ ಸರಇರಲಿಲ್ಲ. ಮಹಿಳೆಯೇ ಅದನ್ನು ಕದ್ದುಕೊಂಡು ಹೋಗಿರಬಹುದೆಂಬ ಅನುಮಾನವಿದೆ. ಆಕೆಯನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು