ಶನಿವಾರ, ಜನವರಿ 16, 2021
25 °C

ಶ್ರೀಗಂಧ ಮರ ಕಳವು; ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ರಾಜರಾಜೇಶ್ವರಿನಗರ  ಪೊಲೀಸರು ಬಂಧಿಸಿದ್ದಾರೆ.

‘ರಾಜೇಶ್, ಲೋಕೇಶ್, ಗೋವಿಂದರಾಜು ಹಾಗೂ ಎಂ.ಎಸ್. ರವಿ ಬಂಧಿತರು. ಅವರಿಂದ ₹ 9.79 ಕೋಟಿ ಮೌಲ್ಯದ 178 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯ ಚನ್ನಸಂದ್ರದ ಕಲಾ ಫಾರ್ಮ್‌ನಲ್ಲಿದ್ದ 2 ಶ್ರೀಗಂಧದ ಮರಗಳನ್ನು ಕಳೆದ ಸೆಪ್ಟೆಂಬರ್ 11ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

’ಕಲಾ ಫಾರ್ಮ್‌ ಬಳಿ ಬೆಳಿಗ್ಗೆ ಓಡಾಡಿದ್ದ ಆರೋಪಿಗಳು, ಶ್ರೀಗಂಧ ಮರ ಇದ್ದ ಬಗ್ಗೆ ತಿಳಿದುಕೊಂಡಿದ್ದರು. ರಾತ್ರಿ ವೇಳೆ ಕಲಾ ಫಾರ್ಮ್‌ಗೆ ನುಗ್ಗಿ ಮರ ಕಡಿದು ಸಾಗಿಸಿದ್ದರು’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.