ಬೆಂಗಳೂರು: ಮೋಜು, ಮಸ್ತಿಯ ಜೀವನಕ್ಕೆ ಮನೆಯಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ಧಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾಮದ ನವೀನ್‌ಕುಮಾರ್ (22) ಹೂಗೂ ಅದೇ ತಾಲ್ಲೂಕಿನ ನಿಡಘಟ್ಟ ಗ್ರಾಮದ ಸೂರ್ಯ ಅಲಿಯಾಸ್ ‘ಸೈಕೊ’ (25) ಬಂಧಿತರು.

‘ಬಂಧಿತರಿಂದ ₹ 7.50 ಲಕ್ಷ ಮೌಲ್ಯದ 123 ಗ್ರಾಂ ಚಿನ್ನಾಭರಣ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.

‘ಅತ್ತಿಬೆಲೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಇಬ್ಬರೂ ಆರೋಪಿಗಳು ಬೈಕ್ ಕಳವು ಮಾಡಿದ್ದರು. ಅದೇ ಬೈಕ್‌ನಲ್ಲಿ ಪ್ರತಿನಿತ್ಯ ಸಂಜೆ ಕೆ.ಆರ್.ಪುರಕ್ಕೆ ರಾತ್ರಿ ವೇಳೆ ಬಂದು, ಬೀಗ ಹಾಕಿದ ಮನೆಗಳಲ್ಲಿ ಗುರುತಿಸಿ ಬೀಗ ಒಡೆದು ಚಿನ್ನಾಭರಣ ಕಳವು ಮಾಡುತ್ತಿದ್ದರು. ಕದ್ದ ಚಿನ್ನಾಭರಣವನ್ನು ಮಾಲೂರಿನ ಫೈನಾನ್ಸ್ ಸಂಸ್ಥೆಯಲ್ಲಿ ಗಿರವಿ ಇಟ್ಟಿದ್ದರು. ಇನ್ನು ಕೆಲವು ಮನೆಗಳಲ್ಲಿ ಕದ್ದ ಆಭರಣಗಳನ್ನು ಮಾರಾಟ ಮಾಡಿದ್ದರು. ಅವುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.