ಶನಿವಾರ, ಆಗಸ್ಟ್ 15, 2020
27 °C

ಕಳ್ಳತನಕ್ಕೆ ಯತ್ನ; ಎಟಿಎಂ ಘಟಕದಲ್ಲೇ ಸಿಕ್ಕಿಬಿದ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣ ಕಳವು ಮಾಡಲೆಂದು ಎಟಿಎಂ ಘಟಕಕ್ಕೆ ನುಗ್ಗಿದ್ದ ಕಳ್ಳನೊಬ್ಬ, ಘಟಕದಲ್ಲಿ ಅಳವಡಿಸಿದ್ದ ಸೆನ್ಸರ್‌ನಿಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಎಟಿಎಂ ಘಟಕದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪದಡಿ ಶಿವಣ್ಣ ಎಂಬಾತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಕಬ್ಬಿಣದ ರಾಡ್ ಜಪ್ತಿ ಮಾಡಲಾಗಿದೆ’ ಎಂದು ಮೈಕೊ ಲೇಔಟ್ ಪೊಲೀಸರು ಹೇಳಿದರು.

‘ಠಾಣೆ ವ್ಯಾಪ್ತಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಎಟಿಎಂ ಘಟಕವಿದೆ. ಜುಲೈ 6ರಂದು ರಾತ್ರಿ ಘಟಕಕ್ಕೆ ನುಗ್ಗಿದ್ದ ಆರೋಪಿ, ರಾಡ್‌ನಿಂದ ಯಂತ್ರ ಮುರಿಯಲು ಯತ್ನಿಸಿದ್ದ. ಅದೇ ವೇಳೆ ಘಟಕದ ಸೆನ್ಸರ್‌ನಿಂದಾಗಿ, ಬ್ಯಾಂಕ್ ಭದ್ರತಾ ಉಸ್ತುವಾರಿ ಅಧಿಕಾರಿಗಳಿಗೆ ಸಂದೇಶ ಹೋಗಿತ್ತು.’

‘ಅಧಿಕಾರಿಗಳ ಸೂಚನೆಯಂತೆ ಭದ್ರತಾ ಸಿಬ್ಬಂದಿ, ಘಟಕಕ್ಕೆ ಬಂದಿದ್ದರು. ಆರೋಪಿ ಘಟಕದಲ್ಲೇ ಇದ್ದ. ಘಟಕದ ಬಾಗಿಲನ್ನು ಹೊರಗಿನಿಂದ ಲಾಕ್‌ ಮಾಡಿದ್ದ ಸಿಬ್ಬಂದಿ, ಠಾಣೆಗೆ ಮಾಹಿತಿ ನೀಡಿದ್ದರು’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.