ಬೆಂಗಳೂರು: ಸ್ನೇಹಿತನನ್ನೇ ಅಪಹರಿಸಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಬಾಲಕ ಸೇರಿ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್.ಹೊಸಹಳ್ಳಿ ನಿವಾಸಿಗಳಾದ ಖಾಜ (19) ಮತ್ತು ಜಾನ್ ಪೀಟರ್ (20) ಹಾಗೂ ಬಾಲಕನನ್ನು ಬಂಧಿಸಲಾಗಿದೆ.

‘ಗೂಡ್ಸ್ ವಾಹನ ಚಾಲಕ ಬಸವರಾಜ್ ಅವರನ್ನು ಆರೋಪಿಗಳು ಅಪಹರಿಸಿ, ಹಣ ಸುಲಿಗೆ ಮಾಡಿದ್ದರು. ಕ್ಯಾಬ್ ಖರೀದಿಸುವ ಸಲುವಾಗಿ ಗೂಡ್ಸ್ ವಾಹನ ಮಾರಾಟ ಮಾಡಿದ್ದರು. ಅದರಿಂದ ಬಂದ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ವಿಷಯ ತಿಳಿದ ಬಸವರಾಜ್ ಸ್ನೇಹಿತ ಖಾಜ ಮತ್ತೊಬ್ಬರೊಂದಿಗೆ ಸೇರಿ ಜನವರಿ 30ರಂದು ಸಂಜೆ 7 ಗಂಟೆ ಸುಮಾರಿಗೆ ಬಸವರಾಜ್ ಅವರಿಗೆ ಕರೆ ಮಾಡಿ ಮನೆಯಿಂದ ಕರೆಸಿಕೊಂಡು ಬಳಿಕ ಆಟೊದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದುರು’ ಎಂದು ಪೊಲೀಸರು ತಿಳಿಸಿದರು.

ಇದಾದ ನಂತರ ಅವರನ್ನು ಥಳಿಸಿ, ₹1,500 ನಗದು ಕಸಿದುಕೊಂಡಿದ್ದರು. ಅಲ್ಲದೇ ₹50 ಸಾವಿರ ಹಣವನ್ನು ತರಿಸಿಕೊಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಸವರಾಜ್ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.