ಬುಧವಾರ, ಜನವರಿ 29, 2020
30 °C

ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ ವಂಚನೆ; ಠಾಣೆಗೆ ಮಹಿಳೆ ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಿಕ್‌ಟಾಕ್ ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿ ಮದುವೆ ಆಗುವುದಾಗಿ ಹೇಳಿ ₹4 ಲಕ್ಷ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿ ವಿಜಯಲಕ್ಷ್ಮಿ ಎಂಬುವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ವಕೀಲರ ಸಮೇತ ಡಿ.ಜೆ.ಹಳ್ಳಿ ಠಾಣೆಗೆ ಮಂಗಳವಾರ ಹಾಜರಾದ ವಿಜಯಲಕ್ಷ್ಮಿ, ಪ್ರಕರಣ ಸಂಬಂಧ ಪೊಲೀಸರಿಗೆ ಹೇಳಿಕೆ ನೀಡಿದರು. 

‘ವಿಜಯಲಕ್ಷ್ಮಿ ಟಿಕ್‌ಟಾಕ್‌ನಲ್ಲಿ ವಿಡಿಯೊ ಹಾಕುತ್ತಿದ್ದರು. ಅದನ್ನು ಮೆಚ್ಚಿ ಸಂದೇಶ ಕಳುಹಿಸಿದ್ದೆ. ನಮ್ಮಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಮದುವೆ ಆಗುವುದಾಗಿ ಹೇಳಿದ್ದ ಅವರು ₹ 4 ಲಕ್ಷ ಪಡೆದಿದ್ದರು. ಮದುವೆಯಾಗಲು ನಿರಾಕರಿಸುತ್ತಿರುವ ಅವರು ಹಣವನ್ನು ವಾಪಸು ಕೊಡುತ್ತಿಲ್ಲ. ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದು  ರಿಯಲ್ ಎಸ್ಟೇಟ್ ಉದ್ಯಮಿ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಅದರನ್ವಯ ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣ ದಾಖಲಾದಾಗಿನಿಂದ ಮಹಿಳೆ ತಲೆಮರೆಸಿಕೊಂಡಿದ್ದರು. ಈಗ ಜಾಮೀನು ಪಡೆದಿರುವ ಅವರು ಠಾಣೆಗೆ ಬಂದು ಹೇಳಿಕೆ ನೀಡಿ ಹೋಗಿದ್ದಾರೆ’ ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು