ಅತ್ತಿಬೆಲೆ, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಹೆಚ್ಚಳ

ಗುರುವಾರ , ಜೂಲೈ 18, 2019
23 °C
ಜುಲೈ 1ರಿಂದ ಪರಿಷ್ಕೃತ ದರ ಜಾರಿ

ಅತ್ತಿಬೆಲೆ, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಹೆಚ್ಚಳ

Published:
Updated:

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಅತ್ತಿಬೆಲೆ ಟೋಲ್‌ ದರ ₹5ರಿಂದ ₹10 ಏರಿಕೆಯಾಗಲಿದೆ. ತಿಂಗಳ ಪಾಸ್‌ ದರ ₹20ರಿಂದ ₹245ರವರೆಗೆ ಏರಿಕೆಯಾಗಲಿದ್ದು, ಜುಲೈ 1ರಿಂದ ಪರಿಷ್ಕೃತ ದರ ಜಾರಿಯಾಗಲಿದೆ.

ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಬೆಂಗಳೂರು ಎಲಿವೇಟೆಡ್‌ ಟೋಲ್‌ವೇ ಪ್ರೈವೇಟ್‌ ಲಿಮಿಟೆಡ್‌ ತಿಳಿಸಿದೆ.

ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಬಿಟ್ಟು ಉಳಿದೆಲ್ಲಾ ವಾಹನಗಳು ಒಂದು ಟ್ರಿಪ್‌ಗೆ ಹೆಚ್ಚುವರಿಯಾಗಿ ₹5 ಪಾವತಿಸಬೇಕು. ಟ್ರಕ್ ಹಾಗೂ ಭಾರಿ ವಾಹನಗಳು (ಎಂಎವಿ) ಮರಳುವ ವೇಳೆ (ರಿಟರ್ನ್‌ ಜರ್ನಿ) ಹೆಚ್ಚುವರಿಯಾಗಿ ₹10 ಪಾವತಿಸಬೇಕು. ಮಾಸಿಕ ಪಾಸ್‌ ದರ ದ್ವಿಚಕ್ರ ವಾಹನಗಳಿಗೆ ₹20, ಕಾರುಗಳಿಗೆ ₹40, ಲಘು ವಾಣಿಜ್ಯ ವಾಹನಗಳಿಗೆ (ಎಲ್‌ಸಿವಿ) ₹60, ಬಸ್‌ ಹಾಗೂ ಟ್ರಕ್‌ಗಳಿಗೆ ₹120ರಂತೆ ಏರಿಕೆಯಾಗಿದೆ.

ಅತ್ತಿಬೆಲೆ ಟೋಲ್‌ ಪ್ಲಾಜಾ ಬಳಿ ಒಂದು ಟ್ರಿಪ್‌ಗೆ ಎಲ್‌ಸಿವಿ ವಾಹನಗಳು ₹5 ಹಾಗೂ ಎಂಎವಿ ವಾಹನಗಳು ₹10 ಪಾವತಿಸಬೇಕು. ಮರಳುವ ಟ್ರಿಪ್‌ಗೆ ಬಸ್‌  ಹಾಗೂ ಕಾರು ಹೆಚ್ಚುವರಿ ₹5 ಪಾವತಿ ಮಾಡಬೇಕಾಗಿದೆ. ತಿಂಗಳ ಪಾಸ್‌ ದರ ವ್ಯತ್ಯಾಸ ಗಮನಿಸಿದರೆ ಬೈಕ್‌ಗಳಿಗೆ ₹30, ಎಂಎವಿ ವಾಹನಗಳಿಗೆ ₹185ರಷ್ಟು ಏರಿಕೆ ಕಂಡಿದೆ. ಇದರಿಂದ ಮಾಸಿಕ ಪಾಸ್‌ ಬಳಸಿ ಪ್ರಯಾಣಿಸುವ ಐಟಿ ಕಂಪನಿಗಳ ಉದ್ಯೋಗಿಗಳ ಜೇಬಿಗೆ ಕತ್ತರಿ ಬಿದ್ದಂತಾಗಿದೆ. 

‘ಎರಡೂ ಟೋಲ್‌ಗಳಲ್ಲಿನ ದರ ಹೆಚ್ಚಳ ಬಸ್‌ಗಳಿಗೂ ಅನ್ವಯಿಸಲಿದ್ದು, ಬಸ್‌ ಪ್ರಯಾಣ ದರದಲ್ಲಿ ಏರಿಕೆ ಕಾಣಲಿದೆ. ಹೊಸೂರಿಗೆ ಸದ್ಯ ₹2–3 ಟಿಕೆಟ್‌ ದರ ಹೆಚ್ಚಳವಾಗಲಿದೆ. ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳಿಗೆ ಹೋಲಿಸಿದರೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ  ಕಡಿಮೆ.  ಟೋಲ್‌ ದರ ಹೆಚ್ಚಳ‌ದಿಂದ ಬಸ್‌ಗಳ ಮೇಲೆ ಹೆಚ್ಚೇನೂ ಪರಿಣಾಮ ಬೀಳುವುದಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !