2024ರಲ್ಲಿ ₹1800 ಕೋಟಿ ವಂಚನೆ
ಸೈಬರ್ ಅಪರಾಧ ಪ್ರಕರಣಗಳ ಮೇಲ್ವಿಚಾರಣೆಗೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶ್ರೇಣಿಯ ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗುವ ಸೈಬರ್ ಅಪರಾಧ ಪ್ರಕರಣಗಳ ಮೇಲ್ವಿಚಾರಣೆಯನ್ನು ಡಿಜಿಪಿ ಅವರೇ ನೋಡಿಕೊಳ್ಳಲಿದ್ದಾರೆ. 2024ರಲ್ಲಿ 16000 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಸಾರ್ವಜನಿಕರು ₹1800 ಕೋಟಿ ಕಳೆದುಕೊಂಡಿದ್ದರು ಎಂದು ಪರಮೇಶ್ವರ ಹೇಳಿದರು.