ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ ದಂಡ ದುಬಾರಿ

Last Updated 27 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನಗೆ ವಿಧಿಸುವ ದಂಡ ಮೊತ್ತವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಈಗ ದುಬಾರಿ ದಂಡ ತೆರಬೇಕಾಗಿದೆ.

ಅತಿ ವೇಗದ ವಾಹನ ಚಾಲನೆಗೆ ₹500, ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ, ಅಜಾಗರೂಕ ಚಾಲನೆಗೆ ಮೊದಲಿಗೆ ₹1000, ನಂತರದ ತಪ್ಪಿಗೆ ₹2000, ವಿಮೆ ಇಲ್ಲದ ವಾಹನ ಚಲಾಯಿಸಿದರೆ ₹ 1000 ದಂಡ ವಿಧಿಸಲಾಗುತ್ತದೆ.

ನೋಂದಣಿಯಾಗದ ಬೈಕ್ ಚಲಾಯಿಸಿದರೆ ಮೊದಲ ತಪ್ಪಿಗೆ ₹5 ಸಾವಿರ, ನಂತರದ ತಪ್ಪಿಗೆ 10 ಸಾವಿರ,ಫಿಟ್‌ನೆಸ್ ಪ್ರಮಾಣ ಪತ್ರ ಇಲ್ಲದ ಸಾರ್ವಜನಿಕ ವಾಹನಗಳಿಗೆ ಮೊದಲ ಬಾರಿಗೆ ₹2 ಸಾವಿರ, ನಂತರ ₹5 ಸಾವಿರ ದಂಡ ವಿಧಿಸಲು ಆದೇಶಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘನೆ, ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ, ಅಪಾಯಕ್ಕೆ ಆಹ್ವಾನ ನೀಡುವಂತೆ ವಾಹನ ನಿಲುಗಡೆ ಮಾಡಿದರೆ ₹1000 ದಂಡ ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT