ಯಲಹಂಕ–ಮಾಕಳಿದುರ್ಗ ರೈಲು ಮಾರ್ಗ ಸಂಚಾರಕ್ಕೆ ಮುಕ್ತ

ಬೆಂಗಳೂರು: ಯಲಹಂಕ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿದುರ್ಗ ನಡುವಿನ ದ್ವಿಪಥ ವಿದ್ಯುದೀಕರಣ ರೈಲು ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.
ರೈಲ್ವೆ ಸುರಕ್ಷತಾ ಆಯುಕ್ತ ಅಭಯಕುಮಾರ್ ರೈ ಅವರು ಗುರುವಾರ ವಿದ್ಯುದೀಕರಣ ಮಾರ್ಗದ ಸುರಕ್ಷತೆ ಪರಿಶೀಲಿಸಿದರು.
ಯಲಹಂಕ ಮತ್ತು ಮಾಕಳಿದುರ್ಗ ನಡುವಿನ 34 ಕಿಲೋ ಮೀಟರ್ನಲ್ಲಿ ಮಾರ್ಗದಲ್ಲಿ ಅವರು ನಡೆಸಿದ ವೇಗದ ಪರೀಕ್ಷೆ ಯಶಸ್ವಿಯಾಗಿದೆ. ಶುಕ್ರವಾರದಿಂದ ಈ ಮಾರ್ಗ ಸಂಚಾರಕ್ಕೆ ಮುಕ್ತಗೊಂಡಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
2015-16ರಲ್ಲಿ ಉದ್ದೇಶಿತ ಮಾರ್ಗಕ್ಕೆ ಅನುಮೋದನೆ ದೊರಕಿತ್ತು. ನಾಲ್ಕು ವರ್ಷಗಳ ಕಾಮಗಾರಿ ನಡೆದಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.