ಮಂಗಳವಾರ, ಆಗಸ್ಟ್ 4, 2020
24 °C

ತೃತೀಯ ಲಿಂಗಿಗಳಿಗೆ ‘ಭರವಸೆ ಯೋಜನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಕೋಲಾರ ಜಿಲ್ಲೆಯಲ್ಲಿ ತೃತೀಯ ಲಿಂಗಿಗಳ ಸಮುದಾಯಕ್ಕೆ ವಿವಿಧ ಸಂಸ್ಥೆಗಳು ‘ಭರವಸೆ ಯೋಜನೆ’ (ಪ್ರಾಜೆಕ್ಟ್‌ ಹೋಪ್) ಆರಂಭಿಸಿವೆ.

ಡೇರಿ ಫಾರ್ಮಿಂಗ್ ನಡೆಸಲು ಕೌಶಲ ತರಬೇತಿ‌ ನೀಡಿ ಸೌಲಭ್ಯ ಒದಗಿಸಲಾಗುತ್ತಿದೆ. ಯೋಜನೆ ಕುರಿತ ಕಾರ್ಯಕ್ರಮವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಬುಧವಾರ ನಡೆಸಲಾಯಿತು. 

ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ (ಕೆಎಸ್‌ಡಿಎ) ಅಧ್ಯಕ್ಷೆ ರತ್ನಪ್ರಭಾ, ‘ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ತೃತೀಯ ಲಿಂಗಿ ಸಮುದಾಯದವರು ಇಚ್ಛಿಸುತ್ತಾರೆ. ಆದರೆ, ಶಿಕ್ಷಣ ಹಾಗೂ ಕೌಶಲ ತರಬೇತಿಯಿಂದ ವಂಚಿತರಾಗಿದ್ದಾರೆ. ಕಾಲಿನ್ಸ್ ಏರೋಸ್ಪೇಸ್ ಹಾಗೂ ಆರೆಂಜ್ ಟೆಕ್ ಸಂಸ್ಥೆಗಳು ಇವರ ಗೌರವಯುತ ಬದುಕಿಗೆ ಶ್ರಮಿಸುತ್ತಿವೆ’ ಎಂದರು.

ಕಾಲಿನ್ಸ್ ಏರೋಸ್ಪೇಸ್ ಇಂಡಿಯಾದ ಸಿಎಸ್ಆರ್ ಮುಖ್ಯಸ್ಥ ಅಮಿತ್ ಸಾವರ್ಕರ್, ಎನ್‌ಎಸ್‌ಡಿಸಿ ಎಂಗೇಜ್‌ಮೆಂಟ್ ಸೌತ್‌ನ ಮುಖ್ಯಸ್ಥ ಗೌರವ್ ಕಪೂರ್, ಕಾಲಿನ್ಸ್ ಏರೋಸ್ಪೇಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಪರಾಗ್ ವಾಧ್ವಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.