ಸೋಮವಾರ, ಜನವರಿ 27, 2020
26 °C

ಓಂ ಶಕ್ತಿ ದೇವಸ್ಥಾನಕ್ಕೆ ಬಸ್ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳುನಾಡಿನ ಮೇಲ್‌ ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಒದಗಿಸಲಿದೆ.

ಭಕ್ತಾದಿಗಳ ಅನುಕೂಲಕ್ಕಾಗಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೊ.ಸಂ.7760990535), ಮೈಸೂರು ರಸ್ತೆ ಬಸ್ ನಿಲ್ದಾಣದ ಘಟಕ-5 ಮತ್ತು 6ರಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.

‘ಕರ್ನಾಟಕ ಸಾರಿಗೆ ಮಾದರಿಯ 55 ಸೀಟುಗಳ ಬಸ್‌ಗಳಿಗೆ ಪ್ರತಿ ಕಿಲೋ ಮೀಟರ್‌ಗೆ ₹ 41 ಹಾಗೂ ಅಂತರರಾಜ್ಯ ಪರ್ಮಿಟ್ ದರಗಳು ಅನ್ವಯವಾಗುತ್ತವೆ. ಇತರ ನಗರಗಳಿಂದಲೂ ಬಸ್ ನಿಲ್ದಾಣ ಮತ್ತು ಘಟಕಗಳನ್ನು ಸಂಪರ್ಕಿಸಿದರೆ ಬಸ್‌ಗಳನ್ನು ಒದಗಿಸಲಾಗುವುದು’ ಎಂದು ನಿಗಮ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು