ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ ಬಂಧಮುಕ್ತಿ ಅಭಿಯಾನ

Last Updated 25 ನವೆಂಬರ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಮರಗಳ ಬೆಳವಣಿಗೆಗೆ ಅಡ್ಡಿಯಾಗಿದ್ದ ರಕ್ಷಣಾ ಬೇಲಿಗಳನ್ನು ತೆರವು ಮಾಡುವ ‘ಮರಗಳ ಬಂಧಮುಕ್ತಿ ಅಭಿಯಾನ’ಕ್ಕೆ ದೊಮ್ಮಲೂರಿನಲ್ಲಿಚಾಲನೆ ನೀಡಲಾಯಿತು.

ಪಾಲಿಕೆ ಹಾಗೂ ಅಗ್ಲಿ ಇಂಡಿಯನ್‌ ಸ್ವಯಂಸೇವಕ ಸಂಘಟನೆಯ ಸಹಯೋಗದಲ್ಲಿ ನಡೆದ ಬೇಲಿ ತೆರವು ಕಾರ್ಯಾಚರಣೆಗೆ ದೊಮ್ಮಲೂರು ನಿವಾಸಿಗಳು ಕೈಜೋಡಿಸಿದರು.ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ಅವರುಇತ್ತೀಚೆಗಷ್ಟೆ ಅಭಿಯಾನಕ್ಕೆ ಚಾಲನೆ ನೀಡಿದ್ದರು.

‘ರಸ್ತೆ ಬದಿ ನೆಡಲಾಗಿದ್ದ ಸ‌ಸಿಗಳ ರಕ್ಷಣೆಗಾಗಿ 15 ವರ್ಷಗಳ ಹಿಂದೆ ಬೇಲಿ ಹಾಕಲಾಗಿತ್ತು. ಸಸಿಗಳು ದೊಡ್ಡ ಮರಗಳಾಗಿ ಬೆಳೆದಿವೆ. ಮರದ ಗಾತ್ರ ಹೆಚ್ಚಿದ ಕಾರಣ, ಅವುಗಳ ಬೆಳವಣಿಗೆಗೆ ರಕ್ಷಣಾ ಬೇಲಿ ಅಡ್ಡಿಯಾಗಿತ್ತು. ಹೀಗಾಗಿ, ಬೇಲಿಗಳ ತೆರವು ಮಾಡುತ್ತಿದ್ದೇವೆ’ ಎಂದುಸ್ಥಳೀಯ ಪಾಲಿಕೆ ಸದಸ್ಯ ಸಿ.ಆರ್‌.ಲಕ್ಷ್ಮಿನಾರಾಯಣ ತಿಳಿಸಿದರು.

‘ಈ ಬೇಲಿಯನ್ನು ಕೆಲವರು ಕಸದ ಬುಟ್ಟಿ ಮಾಡಿಕೊಂಡು, ಅದರಲ್ಲೇ ಕಸ ತುಂಬಿಸಿದ್ದರು. ಬೆಂಕಿ ಕಿಡಿ ಕೊಂಚ ತಾಗಿದರೂ ಮರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಬ್ಯಾಟರಿಚಾಲಿತ ಯಂತ್ರದ ಮೂಲಕ ಬೇಲಿ ತೆರವು ಮಾಡಲಾಗುತ್ತಿದೆ’ ಎಂದರು.

‘ಒಟ್ಟು 10 ಮರಗಳ ಬೇಲಿ ತೆರವು ಮಾಡಿದ್ದೇವೆ. ಮೊದಲ ಹಂತದಲ್ಲಿ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಎರಡು ಸಾವಿರಕ್ಕೂ ಅಧಿಕ ಮರಗಳನ್ನು ಬಂಧಮುಕ್ತಗೊಳಿಸಲಾಗುವುದು. ಇದರ ಜೊತೆಯಲ್ಲೇ ಮರಗಳ ಸಮೀಕ್ಷೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT