ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ

Last Updated 24 ಅಕ್ಟೋಬರ್ 2022, 12:50 IST
ಅಕ್ಷರ ಗಾತ್ರ

ಬೆಂಗಳೂರು: ಪೃಕೃತಿ ಚಿಕಿತ್ಸೆ ಪಡೆಯಲು ಇಂಗ್ಲೆಂಡ್ ರಾಣಿ (ಕ್ವಿನ್ ಕನ್ಸರ್ಟ್‌) ಕ್ಯಾಮಿಲ್ಲಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.

ಭಾನುವಾರ ಸಂಜೆ ಅವರು ತಮ್ಮ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳ ತಂಡದೊಂದಿಗೆ ಬ್ರಿಟಿಷ್ ಏರ್‌ವೇಸ್‌ ವಿಮಾನದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಾರಿನಲ್ಲಿ ವೈಟ್‌ಫಿಲ್ಡ್‌ನಲ್ಲಿರುವ ಪೃಕೃತಿ ಚಿಕಿತ್ಸಾ ಕೇಂದ್ರಕ್ಕೆ ತಲುಪಿದ್ದಾರೆ.

ಇದೊಂದು ಖಾಸಗಿ ಭೇಟಿಯಾಗಿದ್ದು, ರಾಣಿಯವರು 10 ದಿನದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಮತ್ತು ಯಾರ ಭೇಟಿಗೂ ಅವಕಾಶವಿರುವುದಿಲ್ಲ ಎಂದು ತಿಳಿದು ಬಂದಿದೆ. ಪುನಃಶ್ಚೇತನ (ವೆಲ್‌ನೆಸ್‌) ಚಿಕಿತ್ಸೆಯನ್ನು ಪಡೆಯಲು 75 ವರ್ಷ ವಯಸ್ಸಿನ ಕ್ಯಾಮಿಲ್ಲಾಅವರು ಬೆಂಗಳೂರಿಗೆ ಬಂದಿದ್ದಾರೆ.

ರಾಣಿ ಎರಡನೇ ಎಲಿಜಬೆತ್ ಅವರು ಇತ್ತೀಚಿಗೆ ನಿಧನರಾದ ತರುವಾಯ ಅವರ ಮಗ ಮೂರನೇ ಚಾರ್ಲ್ಸ್‌ ಅವರು ಇಂಗ್ಲೆಂಡ್‌ನ ಪ್ರಸ್ತುತ ರಾಜನಾಗಿದ್ದಾರೆ. ಚಾರ್ಲ್ಸ್‌ ಅವರ ಪತ್ನಿಯೇ ಕ್ಯಾಮಿಲ್ಲಾ.

ಕ್ಯಾಮಿಲ್ಲಾ ಅವರು ರಾಣಿಯಾದ ನಂತರ ಬೆಂಗಳೂರಿಗೆ ಆಗಮಿಸಿರುವುದು ಅವರ ಮೊದಲ ವಿದೇಶ ಪ್ರವಾಸವಾಗಿದೆ. ಈ ಮೊದಲು ಒಟ್ಟು ಅವರು ಆರು ಬಾರಿ ಬೆಂಗಳೂರಿಗೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT