ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟದ ಸರ್ಕಾರಿ ರಂಗಮಂದಿರ

ಶೇ 100 ರಷ್ಟು ಆಸನಗಳಿಗೆ ಅವಕಾಶ ನೀಡಿದರೂ ಕಾಯ್ದಿರಿಸುವಿಕೆಗಿಲ್ಲ ಆಸಕ್ತಿ
Last Updated 21 ಅಕ್ಟೋಬರ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ನಿರ್ಬಂಧ ಗಳನ್ನು ತೆರವುಗೊಳಿಸಿ, ಶೇ 100 ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದರೂ ನಗರದಲ್ಲಿನ ಸರ್ಕಾರಿ ರಂಗಮಂದಿರಗಳ ಕಾಯ್ದಿರಿಸುವಿಕೆಗೆ ಸಾಂಸ್ಕೃತಿಕ ಸಂಘ–ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯುರವೀಂದ್ರ ಕಲಾಕ್ಷೇತ್ರ ಒಳಗೊಂಡಂತೆ ನಗರದ ಏಳು ರಂಗ ಮಂದಿರಗಳನ್ನು ನಿರ್ವಹಣೆ ಮಾಡು ತ್ತಿದೆ. ಇವುಗಳಲ್ಲಿ ಎರಡು ಬಯಲು ರಂಗಮಂದಿರಗಳೂ ಸೇರಿವೆ.ಅಗ್ನಿ ಅವಘಡಕ್ಕೆ ಒಳಗಾಗಿದ್ದ ಕಲಾಗ್ರಾಮದ ಸಾಂಸ್ಕೃತಿಯ ಸಮುಚ್ಚಯ ಸ್ಥಗಿತವಾಗಿ ಮೂರು ವರ್ಷಗಳಾಗುತ್ತಾ ಬಂದರೂ ಬಾಗಿಲು ತೆರೆದಿಲ್ಲ. ಹೀಗಾಗಿ, ಬಹುತೇಕ ಎಲ್ಲ ಕಲಾ ತಂಡಗಳು, ಸಂಘ–ಸಂಸ್ಥೆ ಗಳು ರವೀಂದ್ರ ಕಲಾಕ್ಷೇತ್ರವನ್ನೇ ಅವ ಲಂಬಿಸಿವೆ.

ಕೋವಿಡ್‌ ನಿಯಂತ್ರಣಕ್ಕೆ ಬಂದಿರು ವುದರಿಂದ ಇದೇ ತಿಂಗಳು ನಿರ್ಬಂಧ ಗಳನ್ನು ಪೂರ್ಣ ಪ್ರಮಾಣದಲ್ಲಿ ಸಡಿ ಲಿಸಿ, ಪ್ರದರ್ಶನಗಳಿಗೆ ಅವಕಾಶ ನೀಡ ಲಾಗಿದೆ. ಆದರೆ,ಕೋವಿಡ್‌ನಿಂದ ಉಂಟಾದಆರ್ಥಿಕ ಸಂಕಷ್ಟ ಹಾಗೂ ಪ್ರೇಕ್ಷಕರ ಕೊರತೆಯಿಂದಾಗಿ ಸಂಘ–ಸಂಸ್ಥೆಗಳ ಮುಖ್ಯಸ್ಥರು ರಂಗಮಂದಿರ ಗಳಿಗೆ ಬಾಡಿಗೆ ಪಾವತಿಸಿ, ಪ್ರದರ್ಶನ ನೀಡಲು ಮುಂದಾಗುತ್ತಿಲ್ಲ.

ಈ ತಿಂಗಳು ರವೀಂದ್ರ ಕಲಾಕ್ಷೇತ್ರದಲ್ಲಿ ಈವರೆಗೆ ಏಳುದಿನಗಳು ಮಾತ್ರ ಕಾರ್ಯಕ್ರಮಗಳು ನಡೆದಿವೆ. 830 ಆಸನಗಳ ರವೀಂದ್ರ ಕಲಾಕ್ಷೇತ್ರಕ್ಕೆ ಒಂದು ಪಾಳಿಗೆ ₹ 3 ಸಾವಿರ ಠೇವಣಿ ಸಹಿತ ಒಟ್ಟು ₹ 5,360 ಪಾವತಿಸ
ಬೇಕಾಗುತ್ತದೆ.

ಒಂದೂ ಕಾರ್ಯಕ್ರಮವಿಲ್ಲ: ನಯನ ಸಭಾಂಗಣದಲ್ಲಿ ವಾರಾಂತ್ಯದಲ್ಲಿ ಮಾತ್ರ ಕಾರ್ಯಕ್ರಮಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗುತ್ತಿದೆ. ಕೋವಿಡ್‌ ಪೂರ್ವದಲ್ಲಿ ತಿಂಗಳಿಗೆ ಕನಿಷ್ಠ 10 ಕಾರ್ಯಕ್ರಮಗಳು ಈ ಸಭಾಂಗಣದಲ್ಲಿ ನಡೆಯುತ್ತಿದ್ದವು. ಸಂಸ ಬಯಲು ರಂಗಮಂದಿರ ಹಾಗೂ ಸಮುಚ್ಚಯ ಬಯಲು ರಂಗಮಂದಿರದಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ನಡೆದಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪುಟ್ಟಣ್ಣಚೆಟ್ಟಿ ಪುರ ಭವನಕ್ಕೆದಿನವೊಂದಕ್ಕೆ ₹ 75 ಸಾವಿರ ಬಾಡಿಗೆ ಪಾವತಿಸಬೇಕಿದೆ. ಸಾಂಸ್ಕೃತಿಕ ಸಂಘ–ಸಂಸ್ಥೆಗಳು ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ಅಲ್ಲಿ ಹೆಚ್ಚಿನ ಬಾಡಿಗೆ ಪಾವತಿಸಿ, ಕಾರ್ಯಕ್ರಮಗಳನ್ನು ನಡೆಸಲು ಆಸಕ್ತಿ ತೋರುತ್ತಿಲ್ಲ.

‘ಕೋವಿಡ್‌ ನಿರ್ಬಂಧಗಳನ್ನು ತೆರವುಗೊಳಿಸಿ, ಶೇ 100 ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿರುವುದರಿಂದ ಕಾರ್ಯಕ್ರಮಗಳು ಇನ್ನುಮುಂದೆ ಹೆಚ್ಚುವ ವಿಶ್ವಾಸವಿದೆ. ಆನ್‌ಲೈನ್ ಮೂಲಕ ರಂಗಮಂದಿರಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶವಿದೆ’ ಎಂದು ರವೀಂದ್ರ ಕಲಾಕ್ಷೇತ್ರದ ವ್ಯವಸ್ಥಾಪಕ ಬಿ.ಎಸ್. ಶಿವಪ್ರಕಾಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT