ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್‌ನಲ್ಲಿ ಅಮೆರಿಕ ಕಾನ್ಸುಲೇಟ್‌ ಜನರಲ್‌ ಕಚೇರಿ: ಎಂ.ಬಿ. ಪಾಟೀಲ ಮಾಹಿತಿ

Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲೂ ಅಮೆರಿಕದ ಕಾನ್ಸುಲೇಟ್‌ ಜನರಲ್‌ ಕಚೇರಿ ತೆರೆಯಲು ಸಮ್ಮತಿ ದೊರೆತಿದ್ದು, ವೈಟ್‌ಫೀಲ್ಡ್‌ನಲ್ಲೇ ಸ್ಥಾಪಿಸುವಂತೆ ಕೋರಿಕೆ ಸಲ್ಲಿಸಲಾಗಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. 

ಭಾರತದಲ್ಲಿನ ಅಮೆರಿಕದ ಕಾನ್ಸುಲೇಟ್‌ ಜನರಲ್‌ ಕ್ರಿಸ್ಟೋಫರ್‌ ಡಬ್ಲ್ಯು. ಹೋಡ್ಜಸ್‌ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು.

ಅಮೆರಿಕ ಪ್ರವಾಸದ ಸಮಯದಲ್ಲೇ ಸಮ್ಮತಿ ಪಡೆಯಲಾಗಿತ್ತು. ಕಚೇರಿಗಾಗಿ ವೈಟ್‌ಫೀಲ್ಡ್‌ನಲ್ಲಿ ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಎರಡು ಸಾವಿರ ಎಕರೆಯಲ್ಲಿ ಸ್ಥಾಪಿಸಲಾಗುತ್ತಿರುವ ಉದ್ದೇಶಿತ ಜ್ಞಾನ, ಆರೋಗ್ಯ ರಕ್ಷಣೆ, ನಾವೀನ್ಯತೆ ಮತ್ತು ಸಂಶೋಧನಾ ಕೇಂದ್ರ (ಕೆಎಚ್‌ಐಆರ್‌ಸಿಟಿ) ನಗರದ ಅಭಿವೃದ್ಧಿಗೆ, ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ಬೆಂಗಳೂರನ್ನು ಬಲಪಡಿಸಲು ಸಹಾಯ ಮಾಡಲಿದೆ. ಅಂತಿಮ ಯೋಜನೆಯು ಮುಂದಿನ 2ರಿಂದ 3 ತಿಂಗಳಲ್ಲಿ ಸಿದ್ಧಗೊಳ್ಳಲಿದೆ. ಅಮೆರಿಕ ಮತ್ತು ಯುಎಇನಲ್ಲಿ ರೋಡ್‌ಶೋ ನಡೆಸಲು ಯೋಜಿಸಿದ್ದೇವೆ’ ಎಂದು ಹೇಳಿದರು.

ರಾಜ್ಯದಲ್ಲಿ ವೈಮಾನಿಕ ಮತ್ತು ರಕ್ಷಣೆ, ಸೆಮಿಕಂಡಕ್ಟರ್‌, ಜೈವಿಕ ತಂತ್ರಜ್ಞಾನ, ಮಷಿನ್‌ಟೂಲ್ಸ್‌ ಮತ್ತಿತರ ವಲಯಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಕರ್ನಾಟಕದ 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪಿಸಲು ಅಮೆರಿಕದ ಕಂಪನಿಗಳು ಆಸಕ್ತಿ ಹೊಂದಿವೆ. ಬೆಂಗಳೂರಿನಿಂದ ಹೊರಗಿನ ನಗರಗಳಲ್ಲಿ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು 2024ರ ಫೆಬ್ರುವರಿಯಲ್ಲಿ ಅಮೆರಿಕದ ವಾಣಿಜ್ಯ ನಿಯೋಗ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಹೋಡ್ಜಸ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT