ಸೋಮವಾರ, ಮಾರ್ಚ್ 27, 2023
32 °C

‘ಮೇ 5ರಿಂದ ಟ್ರಾನ್ಸ್‌ಫಾರ್ಮರ್‌ ನಿರ್ವಹಣಾ ಅಭಿಯಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆಗಾಲ ಸಮೀಪಿಸುತ್ತಿರುವುದರಿಂದ ಟ್ರಾನ್ಸ್‌ಫಾರ್ಮರ್(ಪರಿವರ್ತಕ) ಸಂಬಂಧಿಸಿದ ದುರಂತಗಳನ್ನು ತಪ್ಪಿಸಲು ಮೇ 5ರಿಂದ20ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ ಹಮ್ಮಿಕೊಳ್ಳಲು ಇಂಧನ ಇಲಾಖೆ ನಿರ್ಧರಿಸಿದೆ.

‘ರಾಜ್ಯದಲ್ಲಿ 15 ವರ್ಷಕ್ಕಿಂತಲೂ ಹಳೆಯ ಪರಿವರ್ತಕಗಳು ಸಾಕಷ್ಟಿವೆ. ಮಳೆಗಾಲದಲ್ಲಿ ಅವುಗಳ ನಿರ್ವಹಣೆ ಸಮಸ್ಯೆಯಾಗುತ್ತದೆ. ಸಿಡಿಲು ಇತ್ಯಾದಿ ಕಾರಣಗಳಿಂದ ಮತ್ತು ಒಮ್ಮೆಗೆ ಹೆಚ್ಚುವರಿ ವಿದ್ಯುತ್‌ ಪ್ರವಹಿಸಿ ಟ್ರಾನ್ಸ್‌ ಫಾರ್ಮರ್‌ಗಳಿಗೆ ಹಾನಿ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ಅಭಿಯಾನ ನಡೆಸಲಾಗುತ್ತಿದೆ’ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

‘ಎಲ್ಲ ಹಂತದ ಅಧಿಕಾರಿಗಳು ಈ ಅಭಿಯಾನದಲ್ಲಿ ಭಾಗಿಯಾಗಬೇಕು. ಪರಿಶೀಲನೆ ನಡೆಸಿದ ಟ್ರಾನ್ಸ್‌ಫಾರ್ಮರ್‌ಗಳಲ್ಲಿನ ನ್ಯೂನತೆ, ಯಾವ ಕಾರಣಕ್ಕೆ ತೊಂದರೆ ಕಾಣಿಸಿಕೊಂಡಿದೆ ಎಂಬ ವಿವರವನ್ನು ಕೇಂದ್ರ ಕಚೇರಿಗೆ ಪ್ರತಿದಿನ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಪ್ರತಿವರ್ಷ ಈ ರೀತಿಯ ಅಭಿಯಾನ ನಡೆಸುವುದರಿಂದ ಟ್ರಾನ್ಸ್‌ಫಾರ್ಮರ್‌ಗಳ ಕ್ಷಮತೆ ಹೆಚ್ಚಲಿದೆ’

‘ಇಲಾಖೆ ಟ್ರಾನ್ಸ್‌ಫಾರ್ಮರ್‌ಗಳದುರಸ್ತಿಗೆ ಇಲಾಖೆ ಪ್ರತಿವರ್ಷ ₹ 150 ಕೋಟಿ ವೆಚ್ಚ ಮಾಡುತ್ತದೆ. ನಿರ್ವಹಣಾ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ದುರಸ್ತಿ ವೆಚ್ಚ ತಗ್ಗಿಸಲು ಸಾಧ್ಯ. 24 ಗಂಟೆಯಲ್ಲಿ ಟ್ರಾನ್ಸ್‌ಫಾರ್ಮರ್ ಬದಲಾವಣೆ ಯೋಜನೆಯ ಮುಂದು
ವರಿದ ಭಾಗವಿದು. ನಿರ್ವಹಣಾ ಸಮಸ್ಯೆ ಏಕೆ ಉಂಟಾಗುತ್ತಿದೆ ಎಂಬುದನ್ನು ಅರ್ಥೈಸಿಕೊಂಡರೆ ಪರಿಹಾರ ಕಲ್ಪಿಸುವುದು ಸುಲಭ. ಅಲ್ಲದೆ, ಎಲ್ಲಿ ಹೊಸ ಟ್ರಾನ್ಸ್‌ಫಾರ್ಮರ್‌ಗಳ ತುರ್ತು ಅಗತ್ಯವಿದೆ ಎಂಬುದನ್ನೂ ತಿಳಿದುಕೊಳ್ಳಬಹುದು’ ಎಂದಿದ್ದಾರೆ. ‘ಕಳೆದೊಂದು ತಿಂಗಳ ಅವಧಿಯಲ್ಲಿ ನಡೆದ ಟ್ರಾನ್ಸ್‌ಫಾರ್ಮರ್ ದುರಂತಗಳ ಕಾರಣಕ್ಕೆ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ’ ಎಂದೂ ಸುನಿಲ್ ಕುಮಾರ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು