ಬೆಂಗಳೂರು: ಬೆಂಗಳೂರು–ಧಾರವಾಡ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ದರವು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ಟಿಕೆಟ್ ದರ ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಹಾಗೂ ಯಶವಂತಪುರ ರೈಲು ನಿಲ್ದಾಣಕ್ಕೆ ನಿಗದಿ ಪಡಿಸಿರುವ ದರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಎಸ್‌ಆರ್‌ನಿಂದ (ಮೆಜೆಸ್ಟಿಕ್) ಯಶವಂತಪುರಕ್ಕೆ ₹410 (ಅಂದಾಜು 10 ಕಿ.ಮೀ, ಎಸಿ ಚೇರ್ ಕಾರ್) ದರವಿದೆ. ಎಕ್ಸಿಕ್ಯುಟಿವ್ ಕ್ಲಾಸ್‌ಗೆ ₹545 ದರ ನಿಗದಿಪಡಿಸಲಾಗಿದೆ.

ಇಲ್ಲಿಗೆ ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ದರವು ₹ 15, ‘ನಮ್ಮ ಮೆಟ್ರೊ’ ರೈಲು ಟಿಕೆಟ್ ದರ ₹ 26. ಆದರೆ, ‘ವಂದೇ ಭಾರತ್’ನ ದರ 23 ಪಟ್ಟು ದುಬಾರಿಯಾಗಿದೆ ಎಂದು ಪ್ರಯಾಣಿಕರೊಬ್ಬರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.