ಬೆಂಗಳೂರು: ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಮಾಜಿ ಸಹ ಸಂಪಾದಕಿ ಮತ್ತು ಅಂಕಣಗಾರ್ತಿ ವತ್ಸಲಾ ವೇದಾಂತಂ (92) ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ ಪುತ್ರ, ಪುತ್ರಿ ಇದ್ದಾರೆ.

ವತ್ಸಲಾ ವೇದಾಂತಂ ಅವರು ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಜನಿಸಿದ್ದರು. ಬೆಂಗಳೂರಿನ ಮಹಾರಾಣಿ ಕಾಲೇಜು ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಇಂಗ್ಲಿಷ್ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದು, ಹಲವು ವರ್ಷ ಉಪನ್ಯಾಸಕರಾಗಿ ಮತ್ತು ಆಡಳಿತ ವಿಭಾಗದಲ್ಲಿ
ಕಾರ್ಯನಿರ್ವಹಿಸಿದ್ದರು.

ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಡೆಕ್ಕನ್ ಹೆರಾಲ್ಡ್ ಉದ್ಯೋಗಿಯಾಗಿ ಸೇರಿದ್ದ ಅವರು ಪತ್ರಿಕೆಯಲ್ಲಿ ಶಿಕ್ಷಣ, ನೃತ್ಯ ಮತ್ತು ಸಂಗೀತ ಕುರಿತು ಅಂಕಣ ಬರೆಯುತ್ತಿದ್ದರು. 90ರ ದಶಕದಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.

ನಿವೃತ್ತಿ ನಂತರವೂ ಹಲವು ಪತ್ರಿಕೆಗಳಿಗೆ ಪ್ರದರ್ಶಕ ಕಲೆಗಳ ಕಲಾವಿದರು, ಸಂಗೀತಗಾರರು, ನೃತ್ಯಗಾರರು, ಲೇಖಕರನ್ನು ಕುರಿತು ಲೇಖನಗಳನ್ನು ಬರೆಯುತ್ತಿದ್ದರು. ಬಿಡಿ ಬರಹಗಳನ್ನು ಸಂಕಲನವಾಗಿಸಿ ಕಳೆದ ವರ್ಷ ‘ದಿ ಅಚೀವರ್ಸ್’ ಎಂಬ ಕೃತಿ ಪ್ರಕಟಿಸಿದ್ದರು. ತಮ್ಮ ತಾಯಿ ರತ್ನಮ್ಮ ಅಯ್ಯಂಗಾರ್ ಅವರ ಜೀವನ ಚರಿತ್ರೆಯನ್ನು ಇತ್ತೀಚೆಗೆ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.