ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಮಹಾಸಭಾಕ್ಕೆ ಭಾನುವಾರ (ಸೆಪ್ಟೆಂಬರ್ 15) ಚುನಾವಣೆ ನಿಗದಿಯಾಗಿತ್ತು. ಸೆ.11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಶಾಮನೂರು ಶಿವಶಂಕರಪ್ಪ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಬಿ. ದ್ಯಾಬೇರಿ ಅವರು ಭಾನುವಾರ ಘೋಷಿಸಿದರು.
93 ವರ್ಷದ ಶಾಮನೂರು ಅವರು ಅತಿ ಹಿರಿಯ ಶಾಸಕರೂ ಆಗಿದ್ದಾರೆ. ಹಿಂದಿನ ಎರಡು ಅವಧಿಗೆ ಅವರೇ ಅಧ್ಯಕ್ಷರಾಗಿದ್ದರು. ಅಧ್ಯಕ್ಷತೆಯ ಅವಧಿ ಐದು ವರ್ಷಗಳಾಗಿವೆ.