ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂದ್ರ: ಔಷಧದ 10 ವಯಲ್ಸ್ ಕಳವು

Last Updated 1 ಜೂನ್ 2021, 15:54 IST
ಅಕ್ಷರ ಗಾತ್ರ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ರೋಗಿಗಳ ಚಿಕಿತ್ಸೆಗಾಗಿ ವಿತರಿಸಲಾಗಿದ್ದ ‘ಕಪ್ಪು ಶಿಲೀಂದ್ರ’ ರೋಗದ ‘ಆ್ಯಂಫೊಟೆರಿಸಿನ್‌–ಬಿ ’ ಔಷಧದ 10 ವಯಲ್ಸ್‌ಗಳು ಕಳವಾಗಿದ್ದು, ಈ ಸಂಬಂಧ ವಿ.ವಿ. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೋವಿಡ್ ಆರೈಕೆ ಕೇಂದ್ರದ ಅಧಿಕಾರಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿರುವ ವ್ಯಕ್ತಿಗಳೇ ಕಳವು ಮಾಡಿರುವ ಅನುಮಾನವಿದೆ’ ಎಂದು ಪೊಲೀಸರು ಹೇಳಿದರು.

‘ಕಪ್ಪು ಶಿಲೀಂದ್ರ ರೋಗದಿಂದ ಬಳಲುತ್ತಿರುವವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧ ನಿಯಂತ್ರಣಾಧಿಕಾರಿಗಳು ರೋಗಿಗಳ ಸಂಖ್ಯೆಗೆ ತಕ್ಕಂತೆ ವಯಲ್ಸ್‌ಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಪೂರೈಸಿದ್ದರು.’

‘ಕರ್ತವ್ಯದಲ್ಲಿದ್ದ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಬಂದಾಗ, ವಯಲ್ಸ್‌ಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೆಚ್ಚಿನ ಪರಿಶೀಲನೆ ನಡೆಸಿದಾಗ, 10 ವಯಲ್ಸ್‌ಗಳನ್ನು ಯಾರೋ ಕಳವು ಮಾಡಿದ್ದು ಗೊತ್ತಾಗಿದೆ.‌’ ಎಂದೂ ಪೊಲೀಸರು ತಿಳಿಸಿದರು.

ಇತ್ತೀಚೆಗೆ ವಿಕ್ಟೋರಿಯಾ ಆಸ್ಪತ್ರೆಯಿಂದರೆಮ್‌ಡಿಸಿವಿರ್ ಚುಚ್ಚುಮದ್ದು ಸಹ ಕಳವಾಗಿತ್ತು. ಮಾಗಡಿ ರಸ್ತೆಯಲ್ಲಿ ಚುಚ್ಚುಮದ್ದು ಮಾರಾಟ ಮಾಡಲು ಬಂದಿದ್ದ ಆಸ್ಪತ್ರೆಯ ವಾರ್ಡ್ ಬಾಯ್‌ನನ್ನು ಪೊಲೀಸರು ಸೆರೆ ಹಿಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT