ಗುರುವಾರ , ಅಕ್ಟೋಬರ್ 24, 2019
21 °C

ಕಸ ಬಿಸಾಡುವಲ್ಲಿ ರಂಗೋಲಿ

Published:
Updated:
Prajavani

ವೈಟ್‌ಫೀಲ್ಡ್: ರಸ್ತೆ, ಸಾರ್ವಜನಿಕ ಪ್ರದೇಶದಲ್ಲಿ ಕಸ ಬಿಸಾಡುವ ಜಾಗಗಳಲ್ಲಿ ಬಿಬಿಎಂಪಿಯ ಮಹದೇವಪುರ ವಲಯದ ಅಧಿಕಾರಿಗಳು ಸಸಿ ನೆಟ್ಟು, ರಂಗೋಲಿ ಬಿಡಿಸಿ ಸುಂದರ ತಾಣವಾಗಿ ಮಾರ್ಪಡಿಸಲು ಮುಂದಾಗಿದ್ದಾರೆ.

ಕ್ಷೇತ್ರದ ದೊಡ್ಡನಕ್ಕುಂದಿ ವಾರ್ಡ್‌ನ ಇಸ್ರೊ ಬಳಿ ದುರ್ನಾತ ಬೀರುತ್ತಿದ್ದ ಬ್ಲಾಕ್ ಸ್ಪಾಟ್‌ನಲ್ಲಿ ಗಿಡ ನೆಡಲು ಚಾಲನೆ ನೀಡಿದ ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ, ರಸ್ತೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ರಾತ್ರಿ ವೇಳೆ ಕಸ ಎಸೆಯುತ್ತಿದ್ದವರಿಗೆ ದಂಡ ವಿಧಿಸಲಾಗಿತ್ತು. ಆ ಜಾಗಗಳಲ್ಲಿ ರಂಗೋಲಿ ಹಾಕಿ ಗಿಡ ನೆಟ್ಟು ಸುಂದರ ತಾಣವನ್ನಾಗಿ ಮಾಡಲಾಗುವುದು’ ಎಂದರು.

ಮಹದೇವಪುರ ವಲಯದಲ್ಲಿ 12 ಬ್ಲಾಕ್ ಸ್ಥಳಗಳನ್ನು ಗುರುತಿಸಲಾಗಿದ್ದು ಗಿಡ ನೆಟ್ಟು ರಂಗೋಲಿ ಬಿಡಿಸಲಾಗುವುದು ಎಂದರು. ಪಾಲಿಕೆಯ ಸದಸ್ಯೆ ಶ್ವೇತಾ ವಿಜಯಕುಮಾರ್‌ ಇದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)