ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಇಎಸ್:ನವೋದ್ಯಮಗಳ ಆರಂಭಕ್ಕೆ ಬೆಂಬಲ

Last Updated 2 ಆಗಸ್ಟ್ 2021, 23:13 IST
ಅಕ್ಷರ ಗಾತ್ರ

ಬೆಂಗಳೂರು:‘ಪಿಇಎಸ್‌ ವಿಶ್ವವಿದ್ಯಾಲಯದವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೊಸ ವಿಚಾರ ಮತ್ತು ಕೌಶಲಗಳೊಂದಿಗೆ ಮುಂದೆ ಬಂದರೆ,ಅದಕ್ಕೆ ಉತ್ಪನ್ನದ ರೂಪ ನೀಡುವ ಮೂಲಕ ನವೋದ್ಯಮ ಆರಂಭಿಸಲು ಎಲ್ಲ ರೀತಿಯ ಬೆಂಬಲ ನೀಡಲಾಗುವುದು’ ಎಂದುಪಿಇಎಸ್ ವಿಶ್ವವಿದ್ಯಾಲಯದ ವೆಂಚರ್‌ ಲ್ಯಾಬ್ಸ್‌ನ ಸುರೇಶ್‌ ನರಸಿಂಹ ತಿಳಿಸಿದರು.

ವಿಶ್ವವಿದ್ಯಾಲಯದಔಷಧೀಯ ವಿಜ್ಞಾನಗಳ ವಿಭಾಗದ ವತಿಯಿಂದ ಆಯೋಜಿಸಿದ್ದ ‘ನಿಮ್ಮ ಸ್ವಂತ ನವೋದ್ಯಮಗಳನ್ನು ನಿರ್ಮಿಸುವುದು ಹೇಗೆ ಮತ್ತು ಯಾಕೆ?’ ಕುರಿತು ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಫಾರ್ಮಾ ಸೇರಿದಂತೆ ವಿವಿಧ ಕ್ಷೇತ್ರದ ನವೋದ್ಯಮಗಳು ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಒಳಗೆ ಶುರುವಾಗಿ ಇಂದು ಜಾಗತಿಕವಾಗಿ ಬೆಳೆದಿವೆ.ಉದ್ಯಮಶೀಲತೆಯುಆವಿಷ್ಕಾರಕ್ಕೆ ಹಲವಾರು ಆಯ್ಕೆ ಮತ್ತು ಅವಕಾಶಗಳನ್ನು ನೀಡುತ್ತದೆ. ಅಲ್ಲಿ ನಿಮಗೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ’ ಎಂದರು.

‘ಹೊಸ ವಿಚಾರಗಳಿಗೆ ಇಂದು ಉದ್ಯಮಗಳು ವೇದಿಕೆ ಕಲ್ಪಿಸುತ್ತಿವೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಕೌಶಲಗಳಿಗೆಅಗತ್ಯವಿರುವ ಸಂಪನ್ಮೂಲಗಳು, ಆರ್ಥಿಕ ಸಹಾಯ ಸೇರಿದಂತೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು. ಇದರಿಂದ ಉತ್ತಮ ನವೋದ್ಯಮಿಗಳಾಗಿ ಯಶಸ್ವಿ ಕಾಣಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT