ಶನಿವಾರ, ಮೇ 15, 2021
24 °C
ವಾರದ ದಿನಗಳಲ್ಲಿನ ಸಂಚಾರ ಸಮಯವೂ ಕಡಿತ

ವಾರಾಂತ್ಯದಲ್ಲಿ ಮೆಟ್ರೊ ರೈಲು ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೇ 4ರವರೆಗೆ ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಮೆಟ್ರೊ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅಲ್ಲದೆ, ವಾರದ ದಿನಗಳಲ್ಲಿ ಮೆಟ್ರೊ ರೈಲು ಸಂಚಾರ ಅವಧಿಯನ್ನೂ ಕಡಿತಗೊಳಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7ರಿಂದ ರೈಲು ಸಂಚಾರ ಪ್ರಾರಂಭವಾಗುತ್ತದೆ. ಟರ್ಮಿನಲ್‌ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಕೊನೆಯ ರೈಲು ಸಂಜೆ 7.30ಕ್ಕೆ ಹೊರಡುತ್ತದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರ (ಏ.23) ಎಂದಿನಂತೆ ರಾತ್ರಿ 9ರವರೆಗೆ ಮೆಟ್ರೊ ಸೇವೆ ಇರಲಿದೆ. ಸೋಮವಾರದಿಂದ ರಾತ್ರಿ 7.30ಕ್ಕೆ ಕೊನೆಯ ರೈಲು ಈ ನಾಲ್ಕೂ ನಿಲ್ದಾಣಗಳಿಂದ ಹೊರಡಲಿದೆ ಎಂದು ನಿಗಮ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು