ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಹೀಲಿಂಗ್ ಮಾಡುತ್ತಿದ್ದವರಿಗೆ ಸಾರ್ವಜನಿಕರಿಂದ ಥಳಿತ

Last Updated 5 ಆಗಸ್ಟ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯ ಹೆಮ್ಮಿಗೆಪುರ ಸಮೀಪದ ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಮೂವರು ಯುವಕರನ್ನು ಹಿಡಿದು ಸಾರ್ವಜನಿಕರೇ ಥಳಿಸಿರುವ ಘಟನೆ ಸೋಮವಾರ ನಡೆದಿದೆ.

ಯುವಕರ ಹೆಸರು ಗೊತ್ತಾಗಿಲ್ಲ. ಘಟನೆ ಸಂಬಂಧ ಯಾವುದೇ ದೂರು ಸಹ ದಾಖಲಾಗಿಲ್ಲ.’ದ್ವಿಚಕ್ರ ವಾಹನಗಳಲ್ಲಿ ನೈಸ್‌ ರಸ್ತೆಗೆ ಬಂದಿದ್ದ ಯುವಕರು, ಅಪಾಯಕಾರಿ
ಯಾಗಿ ವ್ಹೀಲಿಂಗ್ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಸ್ಥಳೀಯರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಗುಂಪು ಸೇರಿದ್ದ ಸ್ಥಳೀಯರು, ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದು ಯುವಕರನ್ನು ಸುತ್ತುವರಿದು ಥಳಿಸಿದರು. ಕೆಲ ಹೊತ್ತು ರಸ್ತೆಯಲ್ಲೇ ನಿಲ್ಲಿಸಿ ಬುದ್ದಿವಾದ ಹೇಳಿ ಬಿಟ್ಟು ಕಳುಹಿಸಿದರು’ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಗಾಯಗೊಂಡಿದ್ದ ಯುವಕ: ನೈಸ್‌ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಮ್ಮಿಗೆಪುರದ ನಿವಾಸಿಗಳಲ್ಲಿ ಆತಂಕ ಮೂಡಿದೆ.

‘ಇತ್ತೀಚೆಗೆ ಯುವಕನೊಬ್ಬ ವ್ಹೀಲಿಂಗ್ ಮಾಡುವ ವೇಳೆಯಲ್ಲೇ ಸ್ಥಳೀಯ ಯುವಕನಿಗೆ ಸ್ಕೂಟಿ ಗುದ್ದಿಸಿದ್ದ. ಗಾಯಗೊಂಡಿದ್ದ ಯುವಕ ಇದುವರೆಗೂ ಚೇತರಿಸಿಕೊಂಡಿಲ್ಲ. ಈ ಘಟನೆಯಿಂದ ಕೋಪಗೊಂಡಿರುವ ಸ್ಥಳೀಯರು, ವ್ಹೀಲಿಂಗ್ ಮಾಡಲು ಬರುವ ಯುವಕರನ್ನು ಹಿಡಿದು ಪಾಠ ಕಲಿಸುತ್ತಿದ್ದಾರೆ’ ಎಂದು ನಿವಾಸಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT