ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್‌’ ಕಲಾಹಬ್ಬ

Last Updated 4 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ವಿ.ಆರ್ ಬೆಂಗಳೂರಿನಲ್ಲಿ ಫೆಬ್ರುವರಿ 7ರಿಂದ ಒಂದು ತಿಂಗಳ ‘ವೈಟ್ ಫೀಲ್ಡ್ ಆರ್ಟ್ ಕಲೆಕ್ಟಿವ್‌’ನ ಐದನೇ ಆವೃತ್ತಿ ಆರಂಭವಾಗಲಿದೆ. ಮಾರ್ಚ್ 7ರವರೆಗೆ ತಿಂಗಳ ಕಾಲ ಒಂದೇ ಸ್ಥಳದಲ್ಲಿ ಜನರಿಗೆಭರಪೂರ ಕಲೆ, ವಿನ್ಯಾಸ ಮತ್ತು ಮನರಂಜನೆ ನೀಡಲಿದೆ.

ಜೆಡಿ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಶನ್ ಟೆಕ್ನಾಲಜಿ, ಸೃಷ್ಟಿ ಇನ್‌ಸ್ಟಿಟ್ಯೂಟ್‌ ಆಫ್ ಆರ್ಟ್, ಡಿಸೈನ್ & ಟೆಕ್ನಾಲಜಿ, ಆರ್ಟ್ ಫ್ಲೂಟ್, ಡ್ರೀಮ್ ಎ ಡ್ರೀಮ್ ಮತ್ತು ದಿ ಬ್ರೋಕ್ ಆರ್ಟಿಸ್ಟ್ ಕಲೆಕ್ಟಿವ್ ಸೇರಿದಂತೆದೇಶದ ಪ್ರಮುಖ ಕಲಾ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಲಿವೆ.

ಫೆ.7 ರಂದು ವೈಟ್‌ಫೀಲ್ಡ್‌ನ ವಿ.ಆರ್. ಬೆಂಗಳೂರಿನಲ್ಲಿವಿಆರ್ ಆರ್ಟ್ ಕಾರ್ ಅನಾವರಣ ಮಾಡುವುದರ ಮೂಲಕಒಂದು ತಿಂಗಳ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಖ್ಯಾತ ಕಲಾವಿದ ಮುರಳಿ ಚೀರೋತ್ ಅವರು ಈ ಕಲಾಕೃತಿಯನ್ನು ಚಿತ್ರಿಸಿದ್ದಾರೆ. 200 ಹೆಚ್ಚು ಉದಯೋನ್ಮುಖ ಕಲಾವಿದರ ಕೃತಿಗಳ ಅನಾವರಣ ಮತ್ತು ವಿಶೇಷ ಪ್ರದರ್ಶನ ಇರಲಿದೆ. ಜೆಡಿ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಶನ್ ಟೆಕ್ನಾಲಜಿಯ ವಿದ್ಯಾರ್ಥಿಗಳ‘ವೇರೆಬಲ್ ಆರ್ಟ್’ ಫ್ಯಾಶನ್ ಷೋದೊಂದಿಗೆ ಉತ್ಸವ ಮುಕ್ತಾಯಗೊಳ್ಳುತ್ತದೆ.

ಆರ್ಟ್ ಡೆಸರ್ಟ್ ಫೆಸ್ಟಿವಲ್, ಡಬ್ಲ್ಯುಎಸಿ ವಿಶೇಷ ಸಿನೆಮಾ ಸ್ಕ್ರೀನಿಂಗ್ ಮತ್ತು ಮಕ್ಕಳ ಕಲಾ ಸ್ಪರ್ಧೆಯಲ್ಲಿ ನಗರದ ಪ್ರಮುಖ ಅಂತರರಾಷ್ಟ್ರೀಯ ಶಾಲೆಗಳ 500 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ.ಸೂಫಿ ರಸಮಂಜರಿ ಕೂಡ ಇದೆ.‘ವುಮೆನ್ ಇನ್ ಆರ್ಟ್’ ಎಂಬ ಸಂವಾದದಲ್ಲಿ ದೇಶದ ಹೆಸರಾಂತ ಮಹಿಳಾ ಕಲಾವಿದರು ಭಾಗವಹಿಸಲಿದ್ದಾರೆ.ಮೊಯಿ ಪಿಯು ಕುಂಡು ಅವರು ತೀರ್ಪುಗಾರರಾಗಿರುತ್ತಾರೆ.

6 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ವಿಶೇಷ ಅವಕಾಶ ನೀಡಿದೆ. ಮನೆಯಲ್ಲಿ ಬಳಕೆಯಾಗದ ಕೆಲವು ವಸ್ತುಗಳನ್ನು ಕಲಾಕೃತಿಗಳಾಗಿ ಪರಿವರ್ತಿಸುವ ಚಾಕಚಕ್ಯತೆ ಇರುವ ಮಕ್ಕಳು ಇದರಲ್ಲಿ ಭಾಗವಹಿಸಬಹುದು.ಆರ್ಟ್‌ಫ್ಲೂಟ್ ಮತ್ತು ಡ್ರೀಮ್-ಎ-ಡ್ರೀಮ್‌ನ ಆರ್ಟ್ ಫೆಸಿಲಿಟರುಗಳಿಗೆ ತರಬೇತಿ ನೀಡಲಾಗುವುದು.ಮಾಹಿತಿಗಾಗಿ www.vrbengaluru.com ಗೆ ಭೇಟಿ ಕೊಡಿ.

ಕಾರ್ಯಕ್ರಮಗಳ ವಿವರ

ಫೈನ್ ಆರ್ಟ್/ಸ್ಕಲ್ಪ್ಚರ್ಸ್/ಇನ್ಟಾಲೇಶನ್ಸ್ - ಫೆ.7ರಿಂದ ಮಾರ್ಚ್ 7ರವರೆಗೆ

ಸಲೂನ್ ವಿದ್ ಶ್ರೀ- ಕಲೆಯಲ್ಲಿ ಮಹಿಳೆ - ಫೆ 8 ಮತ್ತು ಫೆ 9

ಎಲ್ ಬಿಬಿಸ್ ಆರ್ಟ್ ಡೆಸರ್ಟ್ ಬಜಾರ್ - ಫೆ 8 ಮತ್ತು ಫೆ 9

ಮಕ್ಕಳ ಚಿತ್ರಕಲಾ ಸ್ಪರ್ದೆ - ಫೆ 14 ಮತ್ತು ಫೆ 15

ದಿ ಆರ್ಟ್ ಯಾರ್ಡ್ ಬೈ ಆರ್ಟ್ ಫ್ಲೂಟ್ - ಫೆ 14 ಮತ್ತು ಫೆ 15

ಆರ್ಟ್ ಸಿನೆಮಾ - ಫೆ 16

ರಿ ಇಮ್ಯಾಜಿನ್ ಬೆಂಗಳೂರು - ಫೆ 22 ಮತ್ತು 23

ಅನ್ ಗ್ಯಾಲರಿ-ಸ್ಪೆಸಸ್ ಬಿಯಾಂಡ್ - ಫೆ 22

ಆರ್ಟ್ ಬಜಾರ್ - ಫೆ 29ರಿಂದ ಮಾರ್ಚ್ 01

ಬೇಸ್‌ಮೆಂಟ್‌ ಆರ್ಟ್ ಪ್ರೊಜೆಕ್ಟ್ - ಮಾರ್ಚ್ 1ರಿಂದ 05

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT